ವೀರಾಜಪೇಟೆ, ಮಾ. ೩೦: ದಕ್ಷಿಣ ಕೊಡಗು ಛಾಯಾಚಿತ್ರಗಾರರ ಸಂಘ ವೀರಾಜಪೇಟೆ ತಾಲೂಕು ಇವರ ವತಿಯಿಂದ ಗೋಣಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ರವೀಂದ್ರ ನಾಯಕತ್ವದ ನಿಕಾನ್ ಸ್ಟೆçöÊರ‍್ಸ್ ತಂಡವು ಗೆಲುವು ಸಾಧಿಸಿ ಪ್ರಥಮ ಬಾರಿಗೆ ಮೊದಲ ವರ್ಷದ ಕೊಡಗು ಛಾಯಾಚಿತ್ರಗಾರರ ವಿಜೇತ ಕಪ್ ಪಡೆಯಿತು.
ತಾಲೂಕಿನ ಸುಮಾರು ಐವತ್ತು ಛಾಯಾಚಿತ್ರಗಾರರು ಸುಮಾರು ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡು ಲೀಗ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟಗಳನ್ನು ನಡೆಸಿದರು. ಸಂಘದ ಸ್ಥಾಪಕ ಅಧ್ಯಕ್ಷ ಮೂಕಳೇರ ಲಕ್ಷö್ಮಣ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು.
ಒಂದು ತಂಡಕ್ಕೆ ನಾಲ್ಕು ಓವರ್ ಸೀಮಿತಗೊಳಿಸಲಾಗಿತ್ತು, ಅಶ್ರಫ್ ನಾಯಕತ್ವದ ಮಿರರ್ ಲೆಸ್ ಕ್ರಿಕೆಟರ್ಸ್, ಸುರೇಶ್ ನಾಯಕತ್ವದ ಕೆನನ್ ಬ್ಲಾಸ್ರ‍್ಸ್, ಜೋಬಿ ನಾಯಕತ್ವದ ಪೋಕಸ್ ಹನ್ಟರ್ಸ್, ರವೀಂದ್ರ ನಾಯಕತ್ವದ ನಿಕಾನ್‌ಸ್ಟೆçöÊರ‍್ಸ್ ತಂಡ ರಚಿಸಿ ಯುವಕರು, ಮಕ್ಕಳು, ವಯಸ್ಕರು ಸಮನಾಗಿ ಕ್ರಿಕೆಟ್ ಪಂದ್ಯದಲ್ಲಿ ಪಾಲ್ಗೊಂಡರು.
ಎಲ್ಲಾ ಲೀಗ್ ಪಂದ್ಯದಲ್ಲಿ ಎಲ್ಲಾ ತಂಡಗಳು ಒಂದೊAದು ಬಾರಿ ಜಯ ಸಾಧಿಸಿ ಸಮಬಲ ಕಂಡುಕೊAಡಿತು. ಕೊನೆಗೆ ಅಶ್ರಫ್ ನಾಯಕತ್ವದ ಮಿರರ್ ಲೆಸ್ ಕ್ರಿಕೆಟರ್ ಮತ್ತು ರವೀಂದ್ರ ನಾಯಕತ್ವದ ನಿಕಾನ್ ಸ್ಟೆçöÊರ‍್ಸ್ ತಂಡಗಳು ಫೈನಲ್ ಪಂದ್ಯವಾಡಿ ರವೀಂದ್ರ ನಾಯಕತ್ವದ ನಿಕಾನ್ ಸ್ಟೆçöÊರ‍್ಸ್ ತಂಡವು ಗೆಲುವು ಸಾಧಿಸಿತು. ಅಶ್ರಫ್ ನಾಯಕತ್ವದ ತಂಡ ದ್ವಿತೀಯ ಬಹುಮಾನ ಪಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಿ. ಸಿ ರವೀಂದ್ರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲೆಯ ಛಾಯಾಚಿತ್ರಗಾರರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಮೂಕಳೇರ ಲಕ್ಷö್ಮಣ, ಗೋಣಿಕೊಪ್ಪ ಪ್ರೌಢಶಾಲಾ ಮೈದಾನದ ದಾನಿಗಳಾದ ಕುಪ್ಪಂಡ ಗಣೇಶ್, ವಿಜೇತ ತಂಡಗಳಿಗೆ ತಮ್ಮ ತಂದೆ ತಿರುಮಲ ಕುಮಾರ್ ಅವರ ಹೆಸರಿನಲ್ಲಿ ಉದಾರವಾಗಿ ಬಹುಮಾನ ನೀಡಿದ ತಾಲೂಕು ಸಂಘ ಮಾಜಿ ಅಧ್ಯಕ್ಷ ಶಿವಕುಮಾರ್, ಈ ಹಿಂದೆ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ಆನಂದ, ಮೈಕೆಲ್, ಜಿಲ್ಲಾ ಸಂಘದ ಡಾಡು ಜೋಸೆಫ್, ದೀಪಕ್ ಕುಮಾರ್, ರಾಮದಾಸ್, ಹಿರಿಯ ಛಾಯಾಚಿತ್ರಗಾರರಾದ ಶಿವಣ್ಣ, ಸತ್ತಾರ್ ಭಾಗವಹಿಸಿದ್ದರು.
ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ರವೀಂದ್ರ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್ಮನ್ ಆಗಿ ಸುರೇಶ್ ಆಯ್ಕೆಯಾದರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ರೋಶನ್ ಪಡೆದುಕೊಂಡರು. ವಿಜೇತ ತಂಡಗಳಿಗೆ ಮುಖ್ಯ ಅತಿಥಿಗಳು ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಿದರು.