ನಾಪೋಕ್ಲು, ಮಾ. ೩೦: ಕೊಡಗಿನ ಸಹಕಾರ ಸಂಘಗಳು ರಾಷ್ಟಿçÃಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲ. ರೈತರಿಗೆ ಬೇಕಾದಾಗ ಸಾಲವನ್ನು ಕೊಟ್ಟು ವಸೂಲಿಯನ್ನು ಮಾಡಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿವೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಅವರು ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಸಭಾಭವನ ಮತ್ತು ಸರಕಾರದ ಅನುದಾನದಿಂದ ಬರುವಂತಹ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ರೂ. ೮೭ ಲಕ್ಷ ವೆಚ್ಚದ ತಡೆಗೋಡೆ ಮತ್ತು ಕಾಂಕ್ರಿಟ್ ರಸ್ತೆಯ ಕಾಮಗಾರಿ, ಇಂಟರ್ ಲಾಕ್ ಹಾಸು ಉದ್ಘಾಟಿಸಿದರು. ಕೊಡಗು ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದ್ದು ಹೊರಗಿನ ಸಹಕಾರ ಸಂಘಗಳಲ್ಲಿ ನುಂಗಣ್ಣಗಳಿದ್ದಾರೆ ಎಂದು ಆರೋಪಿಸಿದರು.
ಕೊಡಗಿನ ಡಿ.ಸಿ.ಸಿ. ಬ್ಯಾಂಕ್ ರಾಜ್ಯದಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಇದರ ಅಧ್ಯಕ್ಷರಾದ ಬಾಂಡ್ ಗಣಪತಿಯವರಿಗೆ ಸಹಕಾರ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ ಎಂದರು. ವೈದ್ಯನಾಥನ್ ವರದಿ ಬಗ್ಗೆ ಮಾತನಾಡಿದ ಅವರ ವರದಿಯನ್ನು ನಾವು ಒಪ್ಪಿಕೊಂಡಿದ್ದು ಇದನ್ನು ಕೆಲವು ಅಧಿಕಾರಿಗಳ ಸ್ವಾರ್ಥದಿಂದ ಇಂದು ಅನುಷ್ಠಾನಗೊಳಿಸಲು ತಡವಾಗಿದೆ ಎಂದರು. ಜಮ್ಮಾ ಮಲೆ ಸಮಸ್ಯೆ ಪರಿಹಾರದ ಬಗ್ಗೆ ತಾನು ಅವಿರತವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟಿರುವುದಾಗಿ ಹೇಳಿದರು.
ಇಂಟರ್ ಲಾಕ್ ಅಳವಡಿಕೆ ಯನ್ನು ಉದ್ಘಾಟಿಸಿದ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಶಾತೆಯಂಡ ರವಿ ಕುಶಾಲಪ್ಪ ಮಾತನಾಡಿ ನಮ್ಮ ಸರಕಾರ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿದೆ ಎಂದರು.
ಸಭಾಭವನವನ್ನು ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಿ ಹೋರಾಟ ಮಾಡಿರುವುದರಿಂದ ಇಂದು ಜಿಲ್ಲೆಯ ರಸ್ತೆಗಳು ಅಭಿವೃದ್ಧಿಯತ್ತ ಸಾಗಿವೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಹಾಗೂ ಎಲ್ಲ ಮೂಲಭೂತ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವುದಾಗಿ ತಿಳಿಸಿದರು.
ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಎಲ್ಲರ ಸಹಕಾರದಿಂದ ತಾನು ಸಹಕಾರ ರತ್ನ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಡಿಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪನ್ನ ಅಯ್ಯಪ್ಪ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲಿಯಾಟಂಡ ರಘು ತಮ್ಮಯ್ಯ ಸ್ವಾಗತಿಸಿದರು.
ವೇದಿಕೆಯಲ್ಲಿ ಬಡಕಡ ಸುರೇಶ್ ಬೆಳ್ಯಪ್ಪ, ಉಪಾಧ್ಯಕ್ಷ, ಅಲÁ್ಲರಂಡ ಎಸ್. ಅಯ್ಯಪ್ಪ ಸನ್ನು, ಕಲಿಯಾಟಂಡ ಬೋಪಣ್ಣ, ನಿಡುಮಂಡ ಸಿ. ಪೂವಯ್ಯ, ಕೋಡಿಮಣಿಯಂಡ ಎಂ. ನಾಣಯ್ಯ, ಪರದಂಡ ಪ್ರಮೀಳ, ನಂಬುಡುಮAಡ ಸಿ. ಸುನೀತ, ಎ.ಎನ್. ಲಕ್ಷö್ಮಣ, ಕೋಲೆಯಂಡ ಅಶೋಕ, ಕುಡಿಯರ ಕೆ. ಗಿರೀಶ್, ಮತ್ತು ಎಂ.ಡಿ. ಅಯ್ಯಪ್ಪ, ಕಾರ್ಯನಿರ್ವಣಾಧಿಕಾರಿ ಎಸ್. ಮಂಜುಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದÄ, ಅಂಜಪರುವAಡ ಕುಶಾಲಪ್ಪ ನಿರೂಪಿಸಿ, ವಂದಿಸಿದರು.
- ದುಗ್ಗಳ ಸದಾನಂದ