ಮಡಿಕೇರಿ, ಮಾ. ೩೦: ಕೊಡವರ ಕೋವಿ ಹಕ್ಕು ವಿನಾಯಿತಿಗೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ನಲ್ಲಿ ವೈ.ಕೆ. ಚೇತನ್ ಅವರಿಂದ ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಈ ಹಿಂದೆಯೇ ತಮ್ಮ ವಕೀಲರ ಮೂಲಕ ಕೇವಿಯಟ್ ಸಲ್ಲಿಸಿದ್ದಾರೆ. ಚೇತನ್ ಅವರು ಕಳೆದ ಜನವರಿಯಲ್ಲಿಯೇ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದ್ದು, ಇದರ ಮಾಹಿತಿ ದೊರೆತೊಡನೆ ನಾಚಪ್ಪ ಅವರು ವಕೀಲ ವಿಕ್ರಂ ಹೆಗ್ಡೆ ಅವರ ಮೂಲಕ ಕೇವಿಯಟ್ ಸಲ್ಲಿಸಿದ್ದಾರೆ. ಫೆಬ್ರವರಿ ೬ರಂದೇ ಕೇವಿಯಟ್ ಸಲ್ಲಿಕೆಯಾಗಿದೆ.

ಕೋವಿ ವಿನಾಯಿತಿ ಕೊಡವರ ಸಂವಿಧಾನಬದ್ಧವಾದ ಪಾರಂಪರಿಕ ಹಕ್ಕಾಗಿದ್ದು, ನ್ಯಾಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.