ಮಡಿಕೇರಿ, ಮಾ. ೩೦ : ವಾಂಡರ‍್ಸ್ ಕ್ಲಬ್ ವತಿಯಿಂದ ೨೭ನೇ ವರ್ಷದ ಉಚಿತ ಬೇಸಿಗೆ ಶಿಬಿರ ಏ. ೧ ರಿಂದ ಮೇ ೧ರವರೆಗೆ ಪ್ರತಿದಿನ ಬೆಳಿಗ್ಗೆ ೬.೩೦ ರಿಂದ ೮.೩೦ ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ಫಿಟ್‌ನೆಸ್, ಯೋಗ, ಪ್ರಾಣಾಯಾಮ ಮತ್ತು ಹಾಕಿ ತರಬೇತಿ ನೀಡಲಾಗುವದು. ಶಿಬಿರಾರ್ಥಿಗಳಿಗೆ ಪ್ರತಿದಿನ ಹಾಲು, ಬ್ರೆಡ್, ಮೊಟ್ಟೆ, ಬಾಳೆಹಣ್ಣು ನೀಡಲಾಗುವದೆಂದು ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಬಾಬು ಸೊಮಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಬಾಬು ಸೋಮಯ್ಯ (೯೪೪೮೮೯೫೯೫೦), ವೆಂಕಟೇಶ್ (೭೮೯೨೬೬೧೭೯೪) ಇವರುಗಳನ್ನು ಸಂಪರ್ಕಿಸಬಹುದಾಗಿದೆ.