ಬಾಳೆಲೆ, ಮಾ. ೩೦: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ನಂತರ ತಿತಿಮತಿ ಕೇಂದ್ರದಿAದ ಬಾಳೆಲೆ ಕಡೆ ತೆರಳಲು ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದಿರುವ ಬಗ್ಗೆ ಅರಿತು ಖಾಸಗಿ ಬಸ್ ಮಾಲೀಕರೊಬ್ಬರು ಸಹಕಾರ ನೀಡುತ್ತಿದ್ದಾರೆ. ಬಸ್ ಮಾಲೀಕರಾದ ಕಾಡ್ಯಮಾಡ ಗೌತಮ್ ಅವರು ಪರೀಕ್ಷೆ ಬಳಿಕ ಮಕ್ಕಳು ಬೇಗ ಮನೆಗೆ ತೆರಳಿ ಮುಂದಿನ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲಿ ಎಂಬ ಸದುದ್ದೇಶದೊಂದಿಗೆ ಕೇವಲ ಡೀಸೆಲ್ ಖರ್ಚನ್ನು ಮಾತ್ರ ಪಡೆದುಕೊಂಡು ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಬಾಳೆಲೆ ಹೋಬಳಿಯ ೩ ಸರಕಾರಿ ಶಾಲೆಗಳ ೬೭ ಬಡ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ.