ಸುಂಟಿಕೊಪ್ಪ, ಮಾ. ೨೯: ಹುಟ್ಟಿನಿಂದಲೇ ವಿಶೇಷಚೇತನ ಬಡತನದ ಬೇಗೆಯಲ್ಲಿ ಕೂಲಿ ಕೆಲಸ ಮಾಡಿ ಪದವಿ ಡಿಪ್ಲೋಮೊ ತೇರ್ಗಡೆಯಾಗಿ ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಬಂಗಾರ, ಬೆಳ್ಳಿ ಸೇರಿದಂತೆ ೪ ಪದಕ ಪಡೆದಿರುವವರು ಜೀವನ ಬಂಡಿ ದೂಡಲು ಹರಸಾಹಸ ಪಡುತ್ತಿರುವುದು ನಿಜಕ್ಕೂ ನಮ್ಮ ವ್ಯವಸ್ಥೆಯ ಅಣಕವಾಗಿದೆ.
ಸರಕಾರ ವಿಶೇಷಚೇತನರಿಗಾಗಿ ಒಂದು ಇಲಾಖೆಯನ್ನೇ ಸೃಷ್ಟಿಸಿದೆ. ಅದಕ್ಕಾಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ನಿಗದಿಪಡಿಸಿದೆ. ಆದರೆ ನೈಜ ವಿಶೇಷಚೇತನರಿಗೆ ಅದರ ಸೌಲಭ್ಯ ಸಿಗುತ್ತಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ? ಒಂದೆಡೆ ಸರಕಾರ ಎಲ್ಲಾ ವರ್ಗದವರಿಗೆ ಮೂಲಭೂತ ಸೌಕರ್ಯ, ಹಿರಿಯನಾಗರಿಕರು, ವಿಶೇಷಚೇತನರಿಗೆ ಭದ್ರತೆ ಕಲ್ಪಿಸುತ್ತಿದೆ ಎಂದರೂ ಅದು ನಮ್ಮ ಆಡಳಿತಾಶಾಹಿ ವ್ಯವಸ್ಥೆಯಲ್ಲಿ ನೈಜ ಫಲಾನುಭವಿಗಳಿಗೆ ತಲುಪದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲಾಢ್ಯರ ಪ್ರಭಾವ ಮೂಗುತೂರಿ ಸುವುದೇ ಆಗಿದೆ ಎಂದರೆ ಅತಿಶಯೋಕ್ತಿ ಯಾಗಲಾರದು.
ವಿಶೇಷಚೇತನ ಪ್ರತಿಭೆ: ನಾಕೂರು ಗ್ರಾಮದ ಕೂಲಿ ಕಾರ್ಮಿಕ ಶ್ರೀನಿವಾಸ-ರಾಣಿ ದಂಪತಿಯ ಪುತ್ರÀ ಪಿ.ಎಸ್. ತಿರುಮೂರ್ತಿ. ಹುಟ್ಟಿನಿಂದಲೇ ೨ ಕಾಲುಗಳ ರಹಿತ ಜೀವನ ಸಾಗಿಸುತ್ತಿದ್ದಾರೆ. ತೋಟದ ಲೈನ್‌ಮನೆಯಲ್ಲಿ ಜೀವನ ಬಂಡಿ ಸಾಗಿಸುತ್ತಿದ್ದ ಈ ದಂಪತಿ ಮಗನನ್ನು ಬಿ.ಎ. ಪದವೀಧರನಾಗಿ ಮಾಡಿ ದ್ದಲ್ಲದೆ ಸಹಕಾರ ಇಲಾಖೆಯಿಂದ ಜಿಡಿಸಿ ಡಿಪ್ಲೋಮದಲ್ಲೂ ತೇರ್ಗಡೆ ಯಾಗಲು ಕಾರಣಭೂತರಾಗಿದ್ದಾರೆ.
ತಿರುಮೂರ್ತಿ ವಿಶೇಷಚೇತನ ರಾದರೂ ಶಿಕ್ಷಣದಲ್ಲಿ ಎಷ್ಟು ಆಸಕ್ತಿ ತೋರಿ ಪದವಿ ಪಡೆದರೋ ಹಾಗೆಯೇ ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಾ ಬಂದಿದ್ದಾರೆ. ಮಾದಾಪುರ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿದ್ದಾಗ ಫುಟ್ಬಾಲ್ ಕ್ರೀಡೆ ಜಾವಲಿನ್ ಎಸೆತ, ಶಾಟ್‌ಪುಟ್‌ನಲ್ಲಿ ಆಸಕ್ತಿ ಬೆಳಸಿ ಕೊಂಡು ತರಬೇತಿ ಪಡೆಯುತ್ತಾ ಕ್ರೀಡಾ ಕ್ಷೇತ್ರದಲ್ಲೂ ಪ್ರತಿಭೆ ಹೊರಚೆಲ್ಲಿದ್ದಾರೆ.
ವಿಶೇಷಚೇತನ ಸ್ಪೆಷಲ್ ಒಲಪಿಂಕ್ ಅನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ೨೦೧೫ ರಲ್ಲಿ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಆಯೋಜಿಸಿದ್ದು ರಾಷ್ಟಿçÃಯ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ ತಿರುಮೂರ್ತಿ ಬೆಳ್ಳಿಪದಕವನ್ನು ಗೆದ್ದಿದ್ದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ೨೦೧೫ ರಾಜ್ಯಮಟ್ಟದ ವಿಶೇಷಚೇತನರ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಿದ ತಿರುಮೂರ್ತಿ ಅವರ ತಂಡ ಬಂಗಾರದ ಪದಕ ಬಾಚಿಕೊಂಡಿತ್ತು. ೨೦೧೬ರಲ್ಲಿ ದಾವಣೆಗೆರೆಯಲ್ಲಿ ನಡೆದ ರಾಷ್ಟçಮಟ್ಟದ ಸ್ಪೆಷಲ್ ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ.
೨೦೧೩ರಲ್ಲಿ ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ವಿಶೇಷಚೇತನರ ಪುರುಷರ ಅಥ್ಲೆಟಿಕ್ ಕೂಟದಲ್ಲಿ ಪಾಲ್ಗೊಂಡ ತಿರುಮೂರ್ತಿ ಜಾವಲಿನ್ ಎಸೆತ ಹಾಗೂ ಬಾರದ ಗುಂಡು ಎಸೆತದಲ್ಲಿ ಪ್ರಥಮಸ್ಥಾನ ಪಡೆಯುವ ಮೂಲಕ ಅಥ್ಲೆಟಿಕ್‌ನಲ್ಲೂ ಸೈ ಎಂದು ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.
ಇಷ್ಟೆಲ್ಲಾ ಪ್ರತಿಭೆ ಕ್ರೀಡೆಯಲ್ಲಿ ಹೊಂದಿರುವ ಪದವೀದರ ನಾಗಿರುವ ವಿಶೇಷಚೇತನರಿಗೆ ಸ್ವಂತದಾದ ಮನೆಯೂ ಇಲ್ಲದ ತಿರುಮೂರ್ತಿ ಅವರಿಗೆ ಜನಪ್ರತಿನಿಧಿಗಳು ಸರಕಾರ, ಸರಕಾರಿ ನೌಕರಿಯನ್ನು ಒದಗಿಸಿ ಕೊಡುವ ಬದ್ದತೆ ತೋರಬೇಕಾಗಿದೆ.
- ಜಿ.ಕೆ. ಬಾಲಕೃಷ್ಣ