ವೀರಾಜಪೇಟೆ, ಮಾ. ೨೯: ಮಾರ್ಚ್ ೧೦ ರಂದು ನ್ಯಾಯಾಲಯದ ಆವರಣದಲ್ಲಿ ಮೂರು ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದÀರ್ಭ ಎಸಿಬಿ ಬಲೆಗೆ ಬಿದ್ದಿದ್ದ ನ್ಯಾಯಾಲಯದ ಸಿಬ್ಬಂದಿಗಳಾದ ವಿನಯ್ ಹಾಗೂ ಲವ ಕುಮಾರ್ ಅವರಿಗೆ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಾಧೀಶ ಪಿ.ಎಸ್. ಚಂದ್ರಶೇಖರ್ ಅವರು ಷರತ್ತುಬದ್ದ ಜಾಮೀನು ನೀಡಿದ್ದಾರೆ. ಆರೋಪಿಗಳ ಪರ ಕೊಕ್ಕಂಡ ಜಿ. ಅಪ್ಪಣ್ಣ ವಕಾಲತ್ತು ವಹಿಸಿದ್ದರು.