ಮಡಿಕೇರಿ, ಮಾ. ೨೭: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಗರಸಭೆಯ ವಾರ್ಡ್ ೨೨ ರಲ್ಲಿ ನಗರಸಭಾ ಸದಸ್ಯೆ ಸಬಿತಾ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ವಾರ್ಡ್ನಲ್ಲಿದ್ದ ತ್ಯಾಜ್ಯ, ಬಾಟಲಿಗಳು ಸೇರಿದಂತೆ ಕಸಕಡ್ಡಿಗಳನ್ನು ತೆಗೆದು ತ್ಯಾಜ್ಯ ಮುಕ್ತಗೊಳಿಸಲಾಯಿತು. ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಮನುಮಂಜುನಾಥ್, ವಾರ್ಡ್ ಪ್ರಮುಖರಾದ ಕೇಶವ, ಗೀತಾ ಗಿರೀಶ್, ವಿಜಯ್ ಕಾರ್ಯಪ್ಪ, ಕಾಂತಿ, ಪ್ರಭಾಕರ್, ತೊರೇರ ಮುದ್ದಯ್ಯ, ಭಾಗ್ಯರಾಜ್, ಚಂದ್ರಶೇಖರ್, ವಸಂತ್, ಅನಿಲ್, ಉಮೇಶ್ ಹಾಜರಿದ್ದರು.