ಮಡಿಕೇರಿ, ಮಾ. ೨೭: ರಾಜ್ಯಾದ್ಯಂತ ನಡೆಯುತ್ತಿರುವ ಕಾಂಗ್ರೆಸ್ ಸದಸ್ಯತ್ವದ ಡಿಜಿಟಲ್ ನೋಂದಾವಣಿ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಒಳಪಟ್ಟ ಬೆಟ್ಟಗೇರಿ ವಲಯ ಕಾಂಗ್ರೆಸ್‌ನ ಬೂತ್‌ಗಳಲ್ಲಿ ಕಾಂಗ್ರೆಸ್ ಮುಖಂಡರು ಮನೆ ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಿಸಿದರು.

ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ನಾಪಂಡ ಗಣೇಶ್, ಚೀಫ್ ಎನ್ರೋಲರ್ ಕೇಟೋಳಿ ಮೋಹನ್ ರಾಜ್ ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ, ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಬೊಳ್ಳದಂಡ ನಾಚಪ್ಪ, ಮಾಜಿ ಯೋಧ ಬ್ಲಾಕ್ ಕ್ಯಾಟ್ ಕಮಾಂಡೋ ಕೊಕ್ಕಂಡ ಚಂಗು ಚಂಗಪ್ಪ, ಎನ್ರೋಲರ್‌ಗಳಾದ ಮಜೀದ್, ಹ್ಯಾರಿಸ್, ಸ್ಥಳೀಯ ಮುಖಂಡರಾದ ಮೊಯ್ದು ಬೆಟ್ಟಗೇರಿ, ಶಾಹಿದ್ ಬಾದಶಹ ಸೇರಿದಂತೆ ಪ್ರಮುಖರು ಬೂತ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಜನರ ಮನವೊಲಿಸಿ ಕಾಂಗ್ರೆಸ್ ಸದಸ್ಯತ್ವ ಪಡೆಸುವಲ್ಲಿ ಯಶಸ್ವಿಯಾದರು.