ಗೋಣಿಕೊಪ್ಪ ವರದಿ, ಮಾ. ೨೭: ಬಲ್ಯಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನುಭವ ಹಂಚಿಕೊAಡರು.

ಶಿಬಿರದಲ್ಲಿ ನಾಯಕತ್ವ, ಸಹ ಜೀವನ, ಸಹಕಾರ ತತ್ವದ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ, ಸ್ವಚ್ಛತೆ, ಗ್ರಾಮ ಸಮೀಕ್ಷೆ, ಶ್ರಮದಾನ, ಸದ್ಭಾವನೆ, ಸೌಹಾರ್ಧತೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ರಕ್ಷಣೆ ಜಾಗೃತಿ ಕಲಿತುಕೊಳ್ಳಲು ಸಹಕಾರಿಯಾಯಿತು ಎಂದು ಶಿಬಿರಾರ್ಥಿಗಳು ತಿಳಿಸಿಕೊಟ್ಟರು. ಶಿಸ್ತಿಗೆ ಹೆಚ್ಚು ಆದ್ಯತೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತಮ ನಾಯಕತ್ವ ಸ್ಥಾನವನ್ನು ವಸುಂಧರ ಬಾರ್ಗವ್, ಲಕ್ಷö್ಯ ಪಡೆದುಕೊಂಡರು. ಶಿಸ್ತಿನ ಶಿಬಿರಾರ್ಥಿಯಾಗಿ ಮಣಿಕಂಠ ಹೊರ ಹೊಮ್ಮಿದರು. ಉತ್ತಮ ಸ್ವಯಂಸೇವಕ ಸ್ಥಾನವನ್ನು ಚಂದನ ಮತ್ತು ಶರತ್ ಪಡೆದುಕೊಂಡರು. ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳಿಗೆ ನಡೆದ ಕ್ರೀಡಾಕೂಟದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಕುಂಟಬಿಲ್ಲೆ, ಹಗ್ಗಜಗ್ಗಾಟ, ಮಡಕೆ ಹೊಡೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿ ನಡಿಗೆ, ಲಗೋರಿ, ವಾಲಿಬಾಲ್ ಕ್ರೀಡೆ ನಡೆಯಿತು.

ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರ ಸಮಿತಿ ಅಧ್ಯಕ್ಷ ದೇಯಂಡ ಪಿ. ಅಣ್ಣಯ್ಯ, ನಿರ್ದೇಶಕ ಕೊಟ್ಟಂಗಡ ಅಯ್ಯಪ್ಪ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾಲೇಜು ಉಪ ಪ್ರಾಂಶುಪಾಲೆ ಪೂವಮ್ಮ, ಎನ್‌ಎಸ್‌ಎಸ್ ಯೋಜನಾಧಿಕಾರಿಯಾದ ಮಂದೆಯAಡ ವನಿತ್‌ಕುಮಾರ್, ಎನ್.ಪಿ. ರೀತಾ, ಉಪನ್ಯಾಸಕಿ ಕುಪ್ಪಣಮಾಡ ಎಂ. ಭಾರತಿ, ಮುಖ್ಯಶಿಕ್ಷಕಿ ಬಿ. ಆರ್. ಮಾನಸ ಇದ್ದರು.