ವೀರಾಜಪೇಟೆ, ಮಾ. ೨೭: ಸ್ನೇಹಿತ ಬಳಗ ಕ್ರೀಡಾ ಸಂಘದ ಅಧ್ಯಕ್ಷರಾಗಿ ನಿಕ್ಸನ್ ಡಿಸೋಜ ಮತ್ತು ಕಾರ್ಯದÀರ್ಶಿಯಾಗಿ ಭರತ್ ಆಯ್ಕೆಗೊಂಡಿದ್ದಾರೆ. ವೀರಾಜಪೇಟೆ ನಗರದ ಅಪ್ಪಯ್ಯಸ್ವಾಮಿ ರಸ್ತೆಯ ಸ್ನೇಹಿತರ ಬಳಗ ಕ್ರೀಡಾ ಸಂಘದ ವಾರ್ಷಿಕ ಮಾಹಾಸಭೆ ಸಮುದಾಯ ಭವನದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸ್ನೇಹಿತರ ಬಳಗ ಕ್ರೀಡಾ ಸಂಘದ ನೂತನ ಆಡಳಿತ ಮಂಡಳಿಯನ್ನು ರಚನೆ ಮಾಡಲಾಯಿತು. ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ನಿಕ್ಸನ್ ಡಿಸೋಜಾ, ಉಪಾಧ್ಯಕ್ಷರಾಗಿ ರಾಮಕೃಷ್ಣ, ಕಾರ್ಯದರ್ಶಿಯಾಗಿ ಭರತ್, ಕೋಶಾಧಿಕಾರಿಯಾಗಿ ಪರಮೇಶ್, ಜಂಟಿ ಕೋಶಾಧಿಕಾರಿಗಳಾಗಿ ಬಿ.ಎಸ್. ಕೃಷ್ಣ, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಎಸ್.ಮಹೇಶ್, ಸಹಕ್ರೀಡಾ ಕಾರ್ಯದÀರ್ಶಿಯಾಗಿ ವಿನಿತ್ ಅಯ್ಯಪ್ಪ, ಸಂಘದ ಗೌರವ ಸಲಹೆಗಾರರಾಗಿ ತೀರ್ಥ ಕುಮಾರ್ ಮತ್ತು ಕೃಷ್ಣ ನಂಜಪ್ಪ, ಪ್ರಧಾನ ತರಬೇತುದಾರರಾಗಿ ಜಾನ್ಸನ್, ಸಂಘದ ಕಾನೂನು ಸಲಹೆಗಾರರಾಗಿ ವಕೀಲರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯೆ ಟಿ.ಕೆ. ಯಶೋಧ ಮಂದಣ್ಣ ಅಯ್ಕೆಗೊಂಡರು. ಸ್ನೇಹಿತರ ಬಳಗದ ಸದಸ್ಯ ಬಾಸ್ಕರ್ ಮಾತನಾಡಿದರು. ಸಭೆಯಲ್ಲಿ ಸ್ನೇಹಿತರ ಬಳಗದ ಸಂಘದ ಸರ್ವ ಸದಸ್ಯರು ಮತ್ತು ಹಿರಿಯ, ಕಿರಿಯ ಆಟಗಾರರರು ಹಾಜರಿದ್ದರು.