ಮಡಿಕೇರಿ, ಮಾ. ೨೭: ಮೇಕೇರಿಯ ಪ್ರಸಿದ್ಧ ಶ್ರೀ ಗೌರಿ ಶಂಕರ ದೇವಾಲಯದ ಗರ್ಭಗುಡಿಯ ಪುನರ್ ಪ್ರತಿಷ್ಠಾಪನೆ ಹಿನ್ನೆಲೆ, ಶುಕ್ರವಾರ ನಿಧಿ ಕುಂಭ ಪ್ರತಿಷ್ಠಾಪನಾ ಕಾರ್ಯ ನೆರವೇರಿತು.
ಬೆಳಿಗ್ಗೆ ೮ ಗಂಟೆಯಿAದ ಗಣಪತಿ ಹೋಮ, ಶ್ರೀ ಗೌರಿ ಶಂಕರನಿಗೆ ಮಂಗಳಾರತಿ ಪೂಜೆ ನಡೆಯಿತು. ನಿಧಿ ಕುಂಬ ಪ್ರತಿಷ್ಠಾಪನೆ ಹಿನ್ನೆಲೆ ನೂತನವಾಗಿ ನಿರ್ಮಿಸಲಾಗುತ್ತಿರುವ ಗರ್ಭಗುಡಿಯ ತಳಭಾಗದಲ್ಲಿ ಸಕಲ ದೈವಿಕ ಕಾರ್ಯಗಳೊಂದಿಗೆ ಗ್ರಾಮಸ್ಥರು ತಂದಿದ್ದ ಚಿನ್ನ, ಬೆಳ್ಳಿ ಹಾಗೂ ಪಂಚ ಲೋಹಗಳನ್ನು ಪ್ರತಿಷ್ಠಾಪಿಸಲಾಯಿತು.
ರಾಧಕೃಷ್ಣ ಭಟ್ ಮತ್ತು ದೇವಾಲಯದ ಅರ್ಚಕರಾದ ಕೃಷ್ಣ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಕೊಟ್ಟರು. ಅಪಾರ ಸಂಖ್ಯೆಯಲ್ಲಿ ಮೇಕೇರಿ ಸುತ್ತಮುತ್ತಲ ಗ್ರಾಮಸ್ಥರು, ಶಿವಭಕ್ತರು ನಿಧಿ ಕುಂಭ ಪ್ರತಿಷ್ಠಾಪನೆಯಲ್ಲಿ ಭಾಗಿಗಳಾಗಿ ಶ್ರೀ ಶಂಕರನ ಕೃಪೆಗೆ ಪಾತ್ರರಾದರು.