*ಗೋಣಿಕೊಪ್ಪ, ಮಾ. ೨೭: ಸ್ನೇಹಾಶ್ರಯ ಯೂತ್ ಟ್ರಸ್ಟ್ ವತಿಯಿಂದ ನಿರಾಶ್ರಿತರ ಸಮೀಕ್ಷೆ ನಡೆಸಲಾಯಿತು. ವೀರಾಜಪೇಟೆ ಪಟ್ಟಣದಲ್ಲಿ ರಾತ್ರಿ ೯ ರಿಂದ ೧೨ ರ ತನಕ ನಿರಾಶ್ರಿತರನ್ನು ಪತ್ತೆಹಚ್ಚಿ ೧೭ಕ್ಕೂ ಹೆಚ್ಚು ನಿರಾಶ್ರಿತರನ್ನು ಗುರುತಿಸಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಚಂದ್ರಕುಮಾರ್, ಸ್ನೇಹಾಶ್ರಯ ಯೂತ್ ಟ್ರಸ್ಟ್ ನಿರ್ದೇಶಕ ವಿಶ್ವನಾಥ್ ಹಾಗೂ ತಂಡದವರು ಪಾಲ್ಗೊಂಡಿದ್ದರು.