ಶ್ರೀಮಂಗಲ, ಮಾ. ೨೭: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಪಂದ್ಯಾವಳಿಯ ೬ನೇ ದಿನವಾದ ಭಾನುವಾರದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಮಂಡುವAಡ-ಅಚ್ಚಪAಡ, ಕಳಕಂಡ-ಬೊಟ್ಟAಗಡ ತಂಡ ಸೆಮಿಫೈನಲ್ ಗೇರಿವೆ.ತಾ.೨೯ ಮಂಗಳವಾರ ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸುವ ತಂಡದ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಭಾನುವಾರದ ಮೊದಲ ಪಂದ್ಯದಲ್ಲಿ ಅಳಮೇಂಗಡ ತಂಡ ೫೯/೫ ರನ್ ಗಳಿಸಿತು.ಇದಕ್ಕೆ ಉತ್ತರವಾಗಿ ತೀತಮಾಡ ತಂಡ ೪೯/೬ ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲು ಕಂಡಿತು.ಪAದ್ಯ ಪುರುಷ ಗೌರವವನ್ನು ತೀತಮಾಡ ಪೊನ್ನಣ್ಣ ಪಡೆದರು.
ಎರಡನೇ ಪಂದ್ಯದಲ್ಲಿ ಕರಿನೆರವಂಡ ತಂಡ ೩೦/೧೦ ರನ್ ಗುರಿಯನ್ನು ಕಳಕಂಡ ತಂಡ ೩೨/೨ ಸುಲಭವಾಗಿ ಗುರಿ ಮುಟ್ಟುವ ಮೂಲಕ ಗೆಲುವು ಸಾಧಿಸಿತು.ಕರಿನೆರವಂಡ ದರ್ಶನ್ ಪಂದ್ಯ ಪುರುಷ ಗೌರವ ಪಡೆದರು.
ಮೂರನೇ ಪಂದ್ಯದಲ್ಲಿ ಅಪ್ಪಾರಂಡ ತಂಡ ೬೭/೨ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಪಂದ್ಯAಡ ತಂಡ ೫೪/೫ ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲು ಅನುಭವಿಸಿತು.ಪಂದ್ಯAಡ ಬೋಪಣ್ಣ ಪಂದ್ಯ ಪುರುಷ ಗೌರವ ಪಡೆದರು.
ನಾಲ್ಕನೇ ಪಂದ್ಯದಲ್ಲಿ ಬೊಟ್ಟಂಗಡ ತಂಡ ೫೭/೪ ರನ್ ಗುರಿ ನೀಡಿತು.ನಂತರ ಬ್ಯಾಟ್ ಮಾಡಿದ ಕಾಣತಂಡ ತಂಡ ೪೮/೪ ರನ್ ಗಳಿಸಿ ಸೋಲು ಕಂಡಿತು.ಕಾಣತAಡ ವಿಪನ್ ಉತ್ತಪ್ಪ ಪಂದ್ಯ ಪುರುಷ ಗೌರವ ಪಡೆದರು. ಐದನೇ ಪಂದ್ಯದಲ್ಲಿ ಅಳಮೇಂಗಡ ತಂಡ ೪೪/೩ ರನ್ ಗಳಿಸಿತು.ನಂತರ ಬ್ಯಾಟ್ ಮಾಡಿದ ಕಳಕಂಡ ತಂಡ ೪೬/೧ ರನ್ ಗಳಿಸಿ ಜಯ ಸಾಧಿಸಿತು.ಅಳಮೇಂಗಡ ಸೋಮಯ್ಯ ಪಂದ್ಯ ಪುರುಷ ಗೌರವ ಪಡೆದರು.
ಆರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಟಂಗಡ ತಂಡ ೧೦೮/೫ ಬೃಹತ್ ಗುರಿ ನೀಡಿತು.ನಂತರ ಬ್ಯಾಟ್ ಮಾಡಿದ ಅಪ್ಪಾರಂಡ ತಂಡ ೭೯/೪ ರನ್ ಗಳಿಸಿ ಸೋಲು ಅನುಭವಿಸಿತು.ಅಪ್ಪಾರಂಡ ನೀಲ್ ದೇವಯ್ಯ ಪಂದ್ಯ ಪುರುಷ ಗೌರವ ಪಡೆದರು.
ತಾ.೨೯ ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಮೊದಲ ಸೆಮಿಫೈನಲ್ ಪೂರ್ವಾಹ್ನ ೯ಕ್ಕೆ ಕಳಕಂಡ-ಬೊಟ್ಟAಗಡ, ಎರಡನೇ ಸೆಮಿಫೈನಲ್ ೧೦.೩೦ಕ್ಕೆ ಮಂಡುವAಡ-ಅಚ್ಚಪAಡ ತಂಡದ ನಡುವೆ ನಡೆಯಲಿದ್ದು,ಸೆಮಿಫೈನಲ್ ಸೋತ ತಂಡಗಳ ನಡುವೆ ಮದ್ಯಾಹ್ನ ೧೨ ಗಂಟೆಗೆ ಮೂರನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಅಪರಾಹ್ನ ೨ ಗಂಟೆಗೆ ನಡೆಯಲಿದೆ. ತಾ.೨೮ (ಇಂದು) ಪಂದ್ಯಾವಳಿಗೆ ಬಿಡುವು ಇರುತ್ತದೆ.