ಕೂಡಿಗೆ, ಮಾ. ೨೭: ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿರುವ ರೂ. ೨.೨೫ ಕೋಟಿ ವೆಚ್ಚದ ತೊರೆನೂರು ಸರ್ಕಲ್‌ನಿಂದ ಸೋಮವಾರಪೇಟೆ ಸಂಪರ್ಕ ರಸ್ತೆಯಾದ ಭೈರಪ್ಪನಗುಡಿವರೆಗಿನ ರಸ್ತೆ ಮತ್ತು ತೊರೆನೂರು ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊAಡ ಕಾಂಕ್ರಿಟ್ ರಸ್ತೆಯ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರಸ್ತೆಯ ಅಭಿವೃದ್ಧಿಗೆ ಸರಕಾರ ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಮೂಲಕ ಹಣವನ್ನು ಬಿಡುಗಡೆ ಮಾಡಿದೆ. ಅದರನ್ವಯ ಅವಶ್ಯಕ ರಸ್ತೆಗಳ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ಅದರ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಿ ಇದೀಗ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಬೇಬಿಣ್ಣ, ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸ, ಗ್ರಾ.ಪಂ. ಸದಸ್ಯರಾz ಶಿವಕುಮಾರ್, ದೇವರಾಜ್, ಸಾವಿತ್ರಿ ಗಿರೀಶ್, ತೀರ್ಥನಂದ, ಗ್ರಾಮದ ಪ್ರಮುಖರಾದ ಟಿ.ಕೆ. ಪಾಂಡುರAಗ, ಜಗದೀಶ್ ಕೃಷ್ಣೇಗೌಡ, ಚಂದ್ರಪ್ಪ, ಸಿದ್ದಪ್ಪ, ದೇವರಾಜ್, ಶಿವಕುಮಾರ್, ರವಿಚಂದ್ರ, ಮಹೇಶ್, ಮೋಹನ್ ರಾಜ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಇಂಜಿನಿಯರ್ ಮಹೇಂದ್ರ ಕುಮಾರ್, ಇಂಜಿನಿಯರ್ ಸತ್ಯ, ಅಭಿವೃದ್ಧಿ ಅಧಿಕಾರಿ ವೀಣಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.