ಮಡಿಕೇರಿ, ಮಾ.೨೭ : ಕಾರ್ಮಿಕ ಸಂಘಟನೆಗಳು ತಾ.೨೮ ಮತ್ತು ೨೯ ರಂದು ದೇಶವ್ಯಾಪಿ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಎಐಟಿಯುಸಿ ಸಂಘಟನೆಯ ಕೊಡಗು ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಉಪಾಧ್ಯಕ್ಷ ಎನ್.ಮಣಿ, ಸೂರಿಗಾಗಿ ಸಮಿತಿ ಪ್ರಮುಖರಾದ ಬಿ.ಅಣ್ಣಪ್ಪ, ಹೆಚ್.ಎಸ್.ಶಬಾನ ಹಾಗೂ ಬಿ.ಸುರೇಶ್ ಅವರುಗಳು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಎಐಟಿಯುಸಿ ಬೆಂಬಲ ನೀಡಲಿದೆ. ತಾ.೨೮ ರಂದು ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರದಲ್ಲಿ ಮುಷ್ಕರ ನಡೆಯಲಿದೆ. ತಾ.೨೯ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.