ಸಿದ್ದಾಪುರ, ಮಾ ೨೬: ವಾಲ್ನೂರು -ತ್ಯಾಗತ್ತೂರು ಗ್ರಾಮದ ಶ್ರೀ ಮುತ್ತಪ್ಪ ತಿರುವಪ್ಪನ್ ದೇವಾಲಯದ ೬೪ನೇ ವಾರ್ಷಿಕ ಮಹೋತ್ಸವ ಹಾಗೂ ತೆರೆ ಉತ್ಸವವು ಏಪ್ರಿಲ್ ೨ ಹಾಗೂ ೩ ರಂದು ನಡೆಯಲಿದೆ. ತಾ. ೧ ರಂದು ಗಣಪತಿ ಹೋಮ, ೨ ರಂದು ಧ್ವಜಾರೋಹಣ, ನಡೆಯಲಿದ್ದು, ತ್ಯಾಗತ್ತೂರು ಗ್ರಾಮದ ನಿವಾಸಿ ಬಿ.ಸಿ ಆನಂದ ಬೆಳಿಗ್ಗೆ ೮.೪೫ಕ್ಕೆ ಧ್ವಜಾರೋಹಣ ವನ್ನು ನೆರವೇರಿಸಲಿದ್ದಾರೆ.

ತಾ.೨ ರಂದು ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ರಾತ್ರಿ ೭ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ರಾತ್ರಿ ೮ ಕ್ಕೆ ಕುಟ್ಟಿಚಾತನ್ ದೇವರ ವೆಳ್ಳಾಟಂ, ರಾತ್ರಿ ೯ ಕ್ಕೆ ಅನ್ನ ಸಂತರ್ಪಣೆ, ರಾತ್ರಿ ೧೧ ಗಂಟೆಗೆ ವಸೂರಿಮಾಲಾ ದೇವತೆಯ ವೆಳ್ಳಾಟಂ, ರಾತ್ರಿ ೧೧.೩೦ ಕ್ಕೆ ಕೊರತಿ ದೇವತೆಯ ವೆಳ್ಳಾಟಂ, ರಾತ್ರಿ ೧೨ ಗಂಟೆಗೆ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ರಾತ್ರಿ ೧೨.೩೦ ಕ್ಕೆ ಶ್ರೀ ಮುತ್ತಪ್ಪ ದೇವರ ಮೊದಕಲಶಂ ಜಯಪ್ರಕಾಶ್ ಅವರ ಮನೆಯಿಂದ ವಾದ್ಯ ಮೇಳದೊಂದಿಗೆ ದೇವಾಲಯಕ್ಕೆ ತರಲಾಗುವುದು. ರಾತ್ರಿ ೨ ಕ್ಕೆ ಗುಳಿಗನ ತೆರೆ, ತಾ.೩ರ ಪ್ರಾತಃಕಾಲ ೩ ಗಂಟೆಗೆ ಅಗ್ನಿಕಂಡಾ ಕರ್ಣನ ತೆರೆ, ಪ್ರಾತಃಕಾಲ ೪ ಗಂಟೆಗೆ ಶ್ರೀ ಕೊಟ್ಟಂದೇವರ ತೆರೆ, ೬ ಕ್ಕೆ ಮುತ್ತಪ್ಪ ಹಾಗೂ ತಿರುವಪ್ಪನ ತೆರೆ, ೭ ಕ್ಕೆ ಶ್ರೀ ಕುಟ್ಟಿಚಾತನ ತೆರೆ, ೯ ಕ್ಕೆ ಕೊರತಿ ದೇವತೆಯ ತೆರೆ, ೧೦ ಗಂಟೆಗೆ ವಸೂರಿಮಾಲಾ ದೇವತೆಯ ತೆರೆ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ತೆರೆ ನಡೆಯಲಿದೆ. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.