ಸಿದ್ದಾಪುರ, ಮಾ. ೨೬: ಮಾಲ್ದಾರೆ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಏ.೨ ಹಾಗೂ ೩ ರಂದು ನಡೆಯಲಿದೆ. ತಾ. ೨ ರಂದು ಅಪರಾಹ್ನ ೩.೧೫ ಗಂಟೆಗೆ ಧ್ವಜಾರೋಹಣ, ೩.೩೦ ಗಂಟೆಗೆ ಮುತ್ತಪ್ಪನ ಮಲೆ ಇಳಿಸುವುದು, ಸಂಜೆ ೬.೩೦ ಗಂಟೆಗೆ ಮುತ್ತಪ್ಪನ ವೆಳ್ಳಾಟಂ, ರಾತ್ರಿ ೭.೩೦ ಗಂಟೆಗೆ ಕುಟ್ಟಿಚಾತನ ವೆಳ್ಳಾಟಂ, ರಾತ್ರಿ ೯ ಗಂಟೆಗೆ ಗುಳಿಗನ ವೆಳ್ಳಾಟಂ, ರಾತ್ರಿ ೧೦ ಗಂಟೆಗೆ ವಸೂರಿ ಮಾಲೆಯ ಸ್ನಾನ, ರಾತ್ರಿ ೧೦.೩೦ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ ೧೨ ಗಂಟೆಗೆ ಭಗವತಿ ವೆಳ್ಳಾಟಂ, ತಾ.೩ರ ಪ್ರಾತಃಕಾಲ ೩ ಗಂಟೆಗೆ ಗುಳಿಗನ ತೆರೆ, ಬೆಳಿಗ್ಗೆ ೫ ಗಂಟೆಗೆ ಕುಟ್ಟಿಚಾತನ ತೆರೆ, ಬೆಳಿಗ್ಗೆ ೬.೩೦ ಗಂಟೆಗೆ ಮುತ್ತಪ್ಪನ್ ತಿರುವಪ್ಪನ್ ತೆರೆ, ಬೆಳಿಗ್ಗೆ ೮.೩೦ ಗಂಟೆಗೆ ವಸೂರಿ ಮಾಲೆಯ ತೆರೆ, ಬೆಳಿಗ್ಗೆ ೧೦.೩೦ ಗಂಟೆಗೆ ಭಗವತಿ ತೆರೆ, ಬೆಳಿಗ್ಗೆ ೧೧.೩೦ ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ.