ಗೋಣಿಕೊಪ್ಪ ವರದಿ, ಮಾ. ೨೬; ಹಾಕಿ ಇಂಡಿಯಾ ವತಿಯಿಂದ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯುತ್ತಿರುವ ೧೨ ನೇ ವರ್ಷದ ಕಿರಿಯ ಬಾಲಕಿಯರ ರಾಷ್ಟçಮಟ್ಟದ ಹಾಕಿ ಟೂರ್ನಿಯಲ್ಲಿ ಕೊಡಗು ಆಟಗಾರರನ್ನು ಒಳಗೊಂಡಿರುವ ಕರ್ನಾಟಕ ರಾಜ್ಯ ತಂಡ ಶುಭಾರಂಭ ಮಾಡಿದೆ.
ಶುಕ್ರವಾರದ ಮೊದಲ ಪಂದ್ಯದಲ್ಲಿ ಹಾಕಿ ಗುಜರಾತ್ ವಿರುದ್ಧ ೧೪-೦ ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ.
೧೨, ೫, ೩೭, ೩೩, ೫೪ ನೇ ನಿಮಿಷಗಳಲ್ಲಿ ಎಸ್. ಬಿ. ನಿಸರ್ಗ ೫ ಗೋಲು ಹೊಡೆದರು. ೨, ೩೪, ೪೭ನೇ ನಿಮಿಷದಲ್ಲಿ ಪಾಂಡAಡ ದೇಚಮ್ಮ ಗಣಪತಿ, ೧೧, ೩೦, ೪೮ನೇ ನಿಮಿಷದಲ್ಲಿ ಎಚ್.ಎ. ಅಪ್ಸರಾ ತಲಾ ಮೂರು ಗೋಲು ಬಾರಿಸಿ ಮಿಂಚಿದರು. ೨೮, ೫೮ನೇ ನಿಮಿಷದಲ್ಲಿ ಕಾವೇರಿ ಆರ್. ಲೆಂಕೆಣ್ಣವರ್, ೨೨ನೇ ನಿಮಿಷದಲ್ಲಿ ಸಿ.ಎಂ. ಸಹನಾ ಗೋಲು ಬಾರಿಸಿದರು.
೧೮ ವರ್ಷದೊಳಗಿನ ಈ ಟೂರ್ನಿಯಲ್ಲಿ ಕೊಡಗಿನ ೧೮ ಆಟಗಾರರು ರಾಜ್ಯ ತಂಡದಲ್ಲಿರುವುದು ವಿಶೇಷ.