ಕೂಡಿಗೆ, ಮಾ. ೨೬: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದುಗೂರು ವಿನಲ್ಲಿರುವ ಸಾಮಾಜಿಕ ಅರಣ್ಯ ಸಸ್ಯ ಕ್ಷೇತ್ರದ ಆವರಣದಲ್ಲಿ ೭ನೇ ಹೊಸಕೋಟೆ ಮತ್ತು ಬ್ಯಾಡಗೊಟ್ಟ ಗ್ರಾ.ಪಂ.ಯ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ ಮತ್ತು ಸ್ವಸಹಾಯ ಸಂಘದ ಗುಂಪಿನ ಸದಸ್ಯರಿಗೆ ಕೃಷಿ, ತೋಟ ಗಾರಿಕೆ, ಅರಣ್ಯ, ರೇಷ್ಮೆ ನರ್ಸರಿಗಳನ್ನು ಬೆಳೆಸುವ ಬಗ್ಗೆ ತರಬೇತಿ ನೀಡಲಾ ಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಟಿ.ಎಂ. ರವೀಂದ್ರ ನೆರವೇರಿಸಿದರು.

ಎರಡು ಗ್ರಾ.ಪಂ. ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ೭೦ ಮಹಿಳೆಯರು ಆಗಮಿಸಿ ವಿವಿಧ ಇಲಾಖೆಯ ಸಮರ್ಪಕವಾದ ಮಾಹಿತಿಯನ್ನು ಪಡೆದುಕೊಂಡರು.

ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಕಾವ್ಯ ಮತ್ತು ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಖಾನ್, ಪ್ರೇಮಕುಮಾರ್ ಸೇರಿದಂತೆ ಕೃಷಿ ಮತ್ತು ರೇಷ್ಮೆ ಇಲಾಖೆಯ ಸಿಬ್ಬಂದಿಗಳು, ನರೇಗಾ ಯೋಜನೆ ಸಿಬ್ಬಂದಿಗಳು ಸೇರಿದಂತೆ ಗ್ರಾಮದ. ಸದಸ್ಯರು ಹಾಜರಿದ್ದರು.