ಶ್ರೀಮಂಗಲ, ಮಾ. ೨೬: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಪಂದ್ಯಾವಳಿಯ ೫ನೇ ದಿನ ಮೊದಲ ಪಂದ್ಯದಲ್ಲಿ ಮಂಡುವAಡ ತಂಡ ೬೧/೪ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಅಣ್ಣಳಮಾಡ ತಂಡ ೪೫/೭ ರನ್ ಮಾತ್ರ ಗಳಿಸಿ ಸೋಲು ಅನುಭವಿಸಿತು. ಅಣ್ಣಳಮಾಡ ಮೋನಿಶ್ ಪಂದ್ಯ ಪುರುಷ ಗೌರವ ಪಡೆದರು.

ಎರಡನೇ ಪಂದ್ಯದಲ್ಲಿ ಆಲೇಮಾಡ ತಂಡ ೫೬/೬ ಗಳಿಸಿತು. ಉತ್ತರವಾಗಿ ಚಿಂಡಮಾಡ ತಂಡ ೫೭/೬ ಗಳಿಸಿ ಜಯ ದಾಖಲಿಸಿತು. ಆಲೇಮಾಡ ತಮ್ಮಯ್ಯ ಪಂದ್ಯ ಪುರುಷ ಗೌರವ ಪಡೆದರು.

ಮೂರನೇ ಪಂದ್ಯದಲ್ಲಿ ಅಚ್ಚಪಂಡ ತಂಡದ ೯೮/೫ ಎದುರು ಚೆಕ್ಕೇರ ತಂಡ ೯೭/೩ ಸೋಲು ಅನುಭವಿಸಿತು. ಚೆಕ್ಕೇರ ಕಾರ್ಯಪ್ಪ ಪಂದ್ಯ ಪುರುಷ ಗೌರವ ಪಡೆದರು.

ನಾಲ್ಕನೇ ಪಂದ್ಯದಲ್ಲಿ ಮಂಡುವAಡ ತಂಡ ೮೨/೫ ವಿರುದ್ಧ ಮುಕ್ಕಾಟೀರ ತಂಡ ೩೮/೮ ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲು ಅನುಭವಿಸಿತು. ಮುಕ್ಕಾಟೀರ ಕೌಶಿಕ್ ಪಂದ್ಯ ಪುರುಷ ಗೌರವ ಪಡೆದರು.

ಐದನೇ ಪಂದ್ಯದಲ್ಲಿ ಅಚ್ಚಪಂಡ ತಂಡದ ೭೪/೭ ವಿರುದ್ಧ ಚಿಂಡಮಾಡ ತಂಡ (೫೩/೪) ಸೋಲು ಕಂಡಿತು. ಚಿಂಡಮಾಡ ತಂಡದ ಸಚಿನ್ ಪಂದ್ಯ ಪುರುಷ ಗೌರವ ಪಡೆದರು.