ಚೆಟ್ಟಳ್ಳಿ, ಮಾ. ೨೬: ಕಳೆದ ಎರಡು ದಿನಗಳಿಂದ ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ಚೇರಳ ಗೌಡ ಸಂಘ ಹಾಗೂ ಯುವ ಬಿಗ್ರೇಡ್ ಚೆಟ್ಟಳ್ಳಿ ಇವರ ವತಿಯಿಂದ ನಡೆಯುತ್ತಿರುವ ಮೊದಲನೇ ವರ್ಷದ ಗೌಡ ಕುಟುಂಬಗಳ ನಡುವಿನ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಉಳುವಾರನ, ಕೊಂಪುಳೀರ, ನಂಗಾರು, ಮುಕ್ಕಾಟಿ, ಬಡುವಂಡ್ರ, ಬೊಳ್ಳೂರು, ಪೊನ್ನಚ್ಚನ ಹಾಗೂ ಪಾಣತ್ತಲೆ ಎ ಸೇರಿದಂತೆ ಎಂಟು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ.
ಉಳುವಾರನ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಮರದಾಳು ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಕೊಂಪುಳೀರ ತಂಡ ಪಟ್ಟೆಮನೆ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆಯಿತು.
ನಂಗಾರು ತಂಡವು ಕಟ್ಟೆಮನೆ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಮುಕ್ಕಾಟಿ ತಂಡವು ನಿಡ್ಯಮಲೆ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಗಿಟ್ಟಿಸಿತು.
ಬಡುವಂಡ್ರ ಹಾಗೂ ನೂಜಿಬೈಲು ತಂಡಗಳು ನಡುವಿನ ಪಂದ್ಯದಲ್ಲಿ ಬಡುವಂಡ್ರ ತಂಡ ೧-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯಿತು.
ಬೊಳ್ಳೂರು ಹಾಗೂ ಬೊಳ್ತಾಜಿ ನಡುವಿನ ಪಂದ್ಯದಲ್ಲಿ ರೋಶನ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೊಳ್ಳೂರು ಗೆಲುವು ಸಾಧಿಸಿತು.
ಪೊನ್ನಚ್ಚನ ಹಾಗೂ ಕಾಂಗೀರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಿAದ ಪೊನ್ನಚ್ಚನ ಗೆಲುವು ಸಾಧಿಸಿತು.
ಪಾಣತ್ತಲೆ ಎ ಹಾಗೂ ದಂಬೆಕೋಡಿ ತಂಡಗಳ ನಡುವಿನ ಪಂದ್ಯದಲ್ಲಿ ಪಾಣತ್ತಲೆ ಎ ತಂಡ ೪-೦ ಗೋಲುಗಳ ಅಂತರದಿAದ ಗೆದ್ದಿತು.
ಮಹಿಳೆಯರ ಕಾಲ್ಚೆಂಡು ಪಂದ್ಯಾಟ
ಗೌಡ ಕುಟುಂಬಗಳ ಎರಡು ಮಹಿಳಾ ತಂಡಗಳ ನಡುವೆ ಕಾಲ್ಚೆಂಡು ಪಂದ್ಯಾಟ ತಾ. ೨೭ರಂದು ಇಂದು ನಡೆಯಲಿದೆ.
ಮಹಿಳೆಯರ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಲು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಶನಿವಾರದ ದಿನದ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ತೇನನ ರಾಜೇಶ್, ಚೇರಳ ಗೌಡ ಸಂಘ ಹಾಗೂ ಯುವ ಬ್ರಿಗೇಡ್ ಚೆಟ್ಟಳ್ಳಿ ಇವರು ಗೌಡ ಕುಟುಂಬಗಳ ನಡುವಿನ ಕಾಲ್ಚೆಂಡು ಪಂದ್ಯಾವಳಿಯನ್ನು ಆಯೋಜಿಸಿ ಗೌಡ ಕುಟುಂಬಗಳ ನಡುವೆ ಬಾಂಧವ್ಯ ವೃದ್ಧಿಸಲು ವೇದಿಕೆ ಒದಗಿಸಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಚೇರಳ ಗೌಡ ಸಂಘದ ಅಧ್ಯಕ್ಷರಾದ ಅಯ್ಯಂಡ್ರ ರಾಘವಯ್ಯ, ಕಾರ್ಯದರ್ಶಿ ಆಜೀರ ಧನಂಜಯ, ಖಜಾಂಜಿ ಮುಕ್ಕಾಟಿ ಪಳಂಗಪ್ಪ, ಹಾಗೂ ಚೇರಳ ಗೌಡ ಸಂಘದ ಕೋಶಾಧಿಕಾರಿ ಹಾಗೂ ಯುವ ಬ್ರಿಗೇಡ್ ಕಾರ್ಯದರ್ಶಿ ಪೇರಿಯನ ಉದಯ ಇದ್ದರು.
ಸಮಾರೋಪ ಸಮಾರಂಭ: ತಾ. ೨ರಂದು (ಇಂದು) ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಉದ್ಯಮಿ ಪೊನ್ನಚ್ಚನ ಮಧು, ಡಾ. ಮಂಥರ್ ಗೌಡ, ಚೇರಳ ಗೌಡ ಸಂಘದ ಖಜಾಂಚಿ ಮಕ್ಕಾಟಿ ಪಳಂಗಪ್ಪ, ಉಪಾಧ್ಯಕ್ಷ ಹೊಸಮನೆ ಟಿ. ಪೂವಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.