ಗೋಣಿಕೊಪ್ಪಲು, ಮಾ. ೨೬: ಬಿ.ಶೆಟ್ಟಿಗೇರಿ ಬಳಿ ಹುಲಿ ದಾಳಿ ನಡೆಸಿದ್ದು ಗ್ರಾಮದ ಸಿ. ಪೊನ್ನಪ್ಪ ಅವರಿಗೆ ಸೇರಿದ ಕರು ಸಾವನ್ನಪ್ಪಿದೆ.
ಮಧ್ಯಾಹ್ನದ ವೇಳೆ ಹುಲಿ ಕರುವಿನ ಮೇಲೆ ದಾಳಿ ನಡೆಸಿದ್ದು ಗ್ರಾಮಸ್ಥರು ಹುಲಿಯನ್ನು ಸಮೀಪದಿಂದ ಕಂಡಿರುವುದಾಗಿ ಹೇಳಿದ್ದಾರೆ.
ಸುದ್ದಿ ತಿಳಿದ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯದ ಆರ್.ಎಫ್.ಒ. ಅಶೋಕ್ ಹುನಗುಂದ ಸಿಬ್ಬಂದಿಗಳಾದ ದಿವಾಕರ್ ಹಾಗೂ ಇತರರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಹುಲಿ ಸೆರೆಗೆ ಬೋನನ್ನು ಅಳವಡಿಸಲಾಗಿದೆ. ಗ್ರಾಮದಲ್ಲಿ ಹುಲಿಯ ಸಂಚಾರದ ಬಗ್ಗೆ ಗ್ರಾಮಸ್ಥರು ಭಯಗೊಂಡಿದ್ದಾರೆ. - ಹೆಚ್.ಕೆ.ಜಗದೀಶ್