ವೀರಾಜಪೇಟೆ, ಮಾ. ೨೬: ಕೊಡಗು ದಂತ ವೈದ್ಯಕೀಯ ಸಂಸ್ಥೆಯ ಓರಲ್ ಕ್ಯಾನ್ಸರ್ ವಿಭಾಗದ ತಂಬಾಕು ವ್ಯಸನ ಮುಕ್ತ ಕೇಂದ್ರದ ವತಿಯಿಂದ ಬಾಯಿಯ ಕ್ಯಾನ್ಸರ್ ಮತ್ತು ತಂಬಾಕು ವ್ಯಸನ ಇವುಗಳ ಬಗ್ಗೆ ಎರಡು ದಿನಗಳÀ ಮಹತ್ವದ ವೈದ್ಯಕೀಯ ಸಂಕಿರಣ ಹಾಗೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮೊದಲ ದಿನ ಕೊಡಗು ವೈದ್ಯಕೀಯ ಸಂಸ್ಥೆಯ ದಂತ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ದೀಪ ವಿ. ಹಾಗೂ ಮನೋವೈದ್ಯಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ರೂಪೇಶ್ ಗೋಪಾಲ್ ಆಗಮಿಸಿ ತಂಬಾಕು ವ್ಯಸನ ಕೇಂದ್ರಗಳಿಗೆ ಬರುವ ರೋಗಿಗಳ ಚಿಕಿತ್ಸೆ ಹಾಗೂ ಅವರ ಅನುಭವಗಳನ್ನು ಹಂಚಿಕೊAಡರು. ಸರ್ಕಾರದಿಂದ ಲಭ್ಯವಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಹಾಗೂ ತಂಬಾಕು ತ್ಯಜಿಸುವ ರೋಗಿಯನ್ನು ದೀರ್ಘಕಾಲದವರೆಗೆ ಪುನರ್ ಅವಲೋಕನದಲ್ಲಿಡುವ ಮಹತ್ವದ ಬಗ್ಗೆ ತಿಳಿಸಿದರು. ಎರಡನೆಯ ದಿನ ಹೆಲ್ತ್ ಕೇರ್ ಗ್ಲೋಬಲ್ ಬೆಂಗಳೂರು ಆಸ್ಪತ್ರೆಯ ಪುನರ್ವಸತಿ ಕಾರ್ಯಕ್ರಮದ ನಿರ್ದೇಶಕ ಡಾ. ಶಾಲಿನಿ ಠಾಕೂರ್ ಆಗಮಿಸಿ ಈಗಿನ ಕ್ಯಾನ್ಸರ್ ಶಸ್ತçಚಿಕಿತ್ಸೆಯ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹಲವು ಚಿಕಿತ್ಸಾ ವಿಧಾನಗಳ ಅಳವಡಿಕೆ ರೋಗಿಯ ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ತಂಬಾಕು ವ್ಯಸನ ಕೇಂದ್ರದ ಸೋಷಿಯಲ್ ವರ್ಕರ್ ಭಾಗವಹಿಸಿ ಅವರ ಅನುಭವ ಹಾಗೂ ಸರ್ಕಾರದಿಂದ ಲಭ್ಯವಿರುವ ನಿಕೋಟಿನ್ ಮಾತ್ರೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕೊಡಗು ದಂತ ವೈದ್ಯಕೀಯ ಸಂಸ್ಥೆಯ ವೈದ್ಯರು, ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು, ದಂತ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.