ಗುಡ್ಡೆಹೊಸೂರು, ಮಾ. ೨೬: ಇಲ್ಲಿಗೆ ಸಮೀಪದ ದೊಡ್ಡಬೆಟ್ಟಗೇರಿಯ ದೇವಸ್ಥಾನ ಆವರಣದಲ್ಲಿ ಕಾಫಿ ಮಂಡಳಿಯಿAದ ಅಲ್ಲಿನ ರೈತರು ಮತ್ತು ಮಂಡಳಿಯ ಸಂಪರ್ಕಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು. ಕಾಫಿ ಬೆಳೆಗಳನ್ನು ಕಾಡುವ ರೋಗಗಳಿಗೆ ಯಾವ ಔಷಧಿ ಸಿಂಪಡಿಸಬೇಕು ಮತ್ತು ಮಣ್ಣು ಪರೀಕ್ಷೆಯ ಬಗ್ಗೆ, ಬಿಳಿ ಕಾಂಡಕೊರಕ, ಮತ್ತು ಕಾಂಡಕೊರಕ ಹುಳಗಳನ್ನು ಹತೋಟಿಗೆ ತರಲು ಸಿಂಪಡಿಸುವ ಔಷಧಿಗಳ ಬಗ್ಗೆ ಕಾಫಿ ಮಂಡಳಿಯ ಅಧಿಕಾರಿಗಳಾದ ಲಕ್ಷಿö್ಮಕಾಂತ ಮತ್ತು ಕೃಷ್ಣಕುಮಾರ್ ಅವರು ತಿಳಿಸಿದರು.

ಈ ಸಂದರ್ಭ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತು ರೈತರು ಹಾಜರಿದ್ದರು. ಅಧಿಕಾರಿಗಳು ರೈತರಿಗೆ ಹಲವು ಸಲಹೆ ನೀಡಿದರು.