*ಗೋಣಿಕೊಪ್ಪ, ಮಾ. ೨೬: ಕಾನೂರು ಗ್ರಾಮ ಪಂಚಾಯಿತಿಯಲ್ಲಿ ಜಲ್ ಜೀವನ್ ಯೋಜನೆಯ ಮನೆ ಮನೆಗೆ ನಲ್ಲಿ ನೀರು ಸಂಪರ್ಕಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ಕಾನೂರು ಬ್ರಹ್ಮಗಿರಿ ಕಾಲೋನಿಯಲ್ಲಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸಮ್ಮುಖದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.
೩೩೬೦ ಮೀ. ಪೈಪ್‌ಲೈನ್, ೫ ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕಾಮಗಾರಿ ೬೧ ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿದ್ದು, ಸುಮಾರು ೩೫೨ ಮನೆಗಳಿಗೆ ನೇರ ನಲ್ಲಿ ನೀರು ಸಂಪರ್ಕವನ್ನು ಒದಗಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.
ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ. ರಶ್ಮಿ, ಉಪಾಧ್ಯಕ್ಷ ಸಚಿನ್ ಸೋಮಣ್ಣ, ಸದಸ್ಯರುಗಳಾದ ಸುಳ್ಳಿಮಾಡ ದೀಪಕ್, ಪಿ.ಎನ್. ಅಣ್ಣಪ್ಪ, ಪಿ.ಟಿ. ದೇವಿ, ಬಿ.ಎಂ. ಭವ್ಯಶ್ರಿ, ಹೆಚ್.ಜಿ. ಪಲ್ಲವಿ, ಹೆಚ್.ಎ. ಧರಣಿ, ಕೆ.ಸಿ. ಮುತ್ತಪ್ಪ, ಪಿ.ಟಿ. ಮಂಜು, ಮಡಿಕೇರಿ ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ಗುತ್ತಿಗೆದಾರ ಪೆಮ್ಮಂಡ ಮಂಜು ಬೋಪಣ್ಣ, ಜಲ್‌ಜೀವನ್ ಯೋಜನೆಯ ಅಭಿಯಂತರ ಗಿರೀಶ್, ಜಿ.ಪಂ. ಅಭಿಯಂತರ ಮಹಾದೇವ್, ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ತಾ.ಪಂ. ಮಾಜಿ ಸದಸ್ಯ ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಇದ್ದರು.