ಸೋಮವಾರಪೇಟೆ, ಮಾ. ೨೫: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ಹಾಕಿ ಕ್ರೀಡೆಗೆ ಸಾಕಷ್ಟು ಪ್ರತಿಭೆಗಳನ್ನು ನೀಡಿದೆ. ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳು ವಂತೆ ಆಸಕ್ತಿ ಮೂಡಿಸಿ, ಪ್ರೋತ್ಸಾಹಿ ಸುವ ಕಾರ್ಯ ಪೋಷಕರಿಂದ ಆಗಬೇಕು ಎಂದು ಪದ್ಮಶ್ರೀ ಪ್ರಶಸ್ತಿ, ಅರ್ಜುನ್ ಅವಾರ್ಡ್ ಪುರಸ್ಕೃತರು ಹಾಗೂ ಅಂರ್ರಾಷ್ಟಿçÃಯ ಹಾಕಿ ಆಟಗಾರರೂ ಆದ ಎಂ.ಪಿ. ಗಣೇಶ್ ಹೇಳಿದರು. ಇಲ್ಲಿನ ಪಯೋನಿರ್ಸ್ ಟೆನ್ನಿಸ್ ಕ್ಲಬ್ಗೆ ೫೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕ್ಲಬ್ ಡೇ ಮತ್ತು ಆಹ್ವಾನಿತ ಸ್ನೂಕರ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಇಂದಿಗೂ ರಾಷ್ಟಿçÃಯ ಹಾಕಿ ಕ್ಯಾಂಪ್ನಲ್ಲಿ ಕೊಡಗಿನ ೧೦ ಕ್ರೀಡಾಪಟುಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಹೊರ ಬರಬೇಕಿದೆ. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಗಣೇಶ್ ಅಭಿಪ್ರಾಯಿಸಿದರು.
ಷಟಲ್ ಬ್ಯಾಡ್ಮಿಂಟನ್ನ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೂಡಿಗೆರೆ ಪ್ಲಾಂರ್ಸ್ ಕ್ಲಬ್ನ ಗೌತಮ್ ಮತ್ತು ಪ್ರಮೋದ್ ಪಡೆದರು. ದ್ವಿತೀಯ ಸ್ಥಾನವನ್ನು ಕುಟ್ಟ ಬ್ರಹ್ಮಗಿರಿ ಕ್ಲಬ್ನ ಧನ್ಯ ಮತ್ತು ಚರ್ಮಣ ಗಳಿಸಿದರು. ಮಹಿಳಾ ವಿಭಾಗದಲ್ಲಿ ಮೂಡಿಗೆÀರೆ ಪ್ಲಾಂರ್ಸ್ ಕ್ಲಬ್ನ ರಶ್ಮಿ ಮತ್ತು ಸುಶ್ಮಿತ ಪ್ರಥಮ ಸ್ಥಾನಗಳಿಸಿದರು. ಮೌನ ಮತ್ತು ಶೃತಿ ಕೀರ್ತಿ ದ್ವಿತೀಯ ಸ್ಥಾನಗಳಿಸಿದರು. ಮಿಕ್ಸೆಡ್ ಡಬಲ್ಸ್ನಲ್ಲಿ ಗೋಣಿಕೊಪ್ಪ ಪ್ಲಾಂರ್ಸ್ ಕ್ಲಬ್ನ ಸಂತೋಷ್ ಮತ್ತು ರಚನ ಪ್ರಥಮ ಸ್ಥಾನಗಳಿಸಿದರು. ದ್ವಿತೀಯ ಸ್ಥಾನವನ್ನು ಮೂಡಿಗೆÀರೆ ಪ್ಲಾಂರ್ಸ್ ಕ್ಲಬ್ನ ಮೌನ ಮತ್ತು ತಂಡ ಪಡೆಯಿತು. ಕಾರ್ಯಕ್ರಮಕ್ಕೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಡಿ.ವಿ. ಶಾಂತಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಎಸ್ಎಲ್ ಎನ್ ಕಾಫಿ ಸಂಸ್ಥೆಯ ಸಾತಪ್ಪನ್, ಹಿರಿಯ ಹಾಕಿಪಟು ಹಾಲಪ್ಪ, ಕರ್ನಾಟಕ ಬ್ಯಾಡ್ ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವಾಸ್, ಚಪ್ಪುಡಿರ ಕಾರ್ಯಪ್ಪ, ಸ್ಪೋರ್ಟ್ಸ ಕ್ಲಬ್ ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.