ಮಡಿಕೇರಿ, ಮಾ. ೨೫: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ೩ನೇ ರಾಜ್ಯ ಅಧಿವೇಶನ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್‌ನ ಪದಾಧಿಕಾರಿಗಳಾದ ಕಡ್ಲೇರ ತುಳಸಿ ಮೋಹನ್ ಹಾಗೂ ಕೋರನ ಸುನಿಲ್ ನೇತೃತ್ವದಲ್ಲಿ ಮೈಸೂರಿನ ಹೂಟಗಳ್ಳಿಯ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ಪುರುಷರ ತಂಡದಿAದ ಹುತ್ತರಿ ಕೋಲಾಟ ಹಾಗೂ ಮುತ್ತಾರ್ಮುಡಿಯ ಮಹಿಳಾ ಸಂಘದವರಿAದ ಹುತ್ತರಿ ಸುಗ್ಗಿ ಕುಣಿತ ಪ್ರದರ್ಶನ ಮಾಡಲಾಯಿತು.

ಪೊನ್ನಚನ ಅಪ್ಪಯ್ಯ, ಚೆರುಕನ ಕುಶ, ಕಾಳಮನೆ ಉಲ್ಲಾಸ, ಬೆಳ್ಳಿಮನೆ ಮೋಹನ್‌ಕುಮಾರ್, ಮೂವನ ನವೀನ್, ಕಡ್ಲೇರ ನಾಗೇಶ್, ಉದಿಯನ ಸುರೇಶ್, ಮಹಿಳಾ ತಂಡದಲ್ಲಿ ತೆಕ್ಕಡೆ ಹರಿಣಿ ರಾಜು, ವನಿತಾ ರಾಜ, ವೀಣಾ ಲವಕುಮಾರ್, ತಾನ್ಯ ಲವ ಕುಮಾರ್, ಕೊಡೆಕಲ್ಲು ಶ್ವೇತಾ ದೀಪಕ್, ದೇರಜೆ ಲತಾ ಲೋಕೇಶ್, ಚರಿಷ್ಮ ಲೋಕೇಶ್, ಹನಿ ಗಿರೀಶ್, ಮೋನಿಷಾ ದೇವರಾಜ್, ದೀಪಿಕಾ ದೇವರಾಜ್ ಭಾಗವಹಿಸಿದ್ದರು.