ವೀರಾಜಪೇಟೆ, ಮಾ. ೨೫: ಇತ್ತೀಚೆಗೆ ಶಿವಮೊಗ್ಗದ ಶಿಕಾರಿಪುರದ ವಕೀಲರನ್ನು ಸಾರ್ವಜನಿಕವಾಗಿ ಕೈಗೆ ಕೈಕೊಳ ತೊಡಿಸಿ ಬಂಧಿಸಿದ ಘಟನೆಗೆ ವೀರಾಜಪೇಟೆ ವಕೀಲರ ಸಂಘವು ವಕೀಲರ ತುರ್ತು ಸಭೆಯನ್ನು ಕರೆದು ಖಂಡನೆ ವ್ಯಕ್ತಪಡಿಸಿತು. ಶಿಕಾರಿಪುರದ ಪೊಲೀಸ್ ವೃತ್ತ ನಿರೀಕ್ಷಕರ ಈ ನಡೆ ಅಪರಾಧವಾಗಿದ್ದು, ಸೇವೆಯಿಂದ ವಜಾಗೊಳಿಸಬೇಕು ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹ ಮಾಡಲಾಯಿತು. ವಕೀಲರುಗಳಾದ ಕೆ.ಎಂ. ಮಾದಪ್ಪ, ಎನ್.ಜಿ. ಕಾಮತ್, ಸಿ.ಎಸ್. ಮಾಚಯ್ಯ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ಸಂಘದ ಪದಾಧಿಕಾರಿಗಳು, ವಕೀಲರುಗಳು ಹಾಜರಿದ್ದರು.