ಗೋಣಿಕೊಪ್ಪಲು, ಮಾ.೨೫: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಕೊಡಗು ಬಲಿಜ ಸಮಾಜ ಸಹಭಾಗಿತ್ವದಲ್ಲಿ ಜಿಲ್ಲೆಯ ೭ ಗ್ರಾಮೀಣ, ನಗರ ಪ್ರದೇಶದಲ್ಲಿ ಕೈವಾರ ತಾತಯ್ಯ ೨೯೬ ನೇ ಜಯಂತ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುವದು ಎಂದು ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಮಡಿಕೇರಿ, ಗೋಣಿಕೊಪ್ಪಲು, ನಾಪೋಕ್ಲು, ಪೊನ್ನಂಪೇಟೆ, ವೀರಾಜಪೇಟೆ, ಶಿರಂಗಾಲ ಹಾಗೂ ಶನಿವಾರಸಂತೆಯಲ್ಲಿ ಆಚರಣೆಗೆ ಈಗಾಗಲೇ ಪೂರ್ವ ಸಿದ್ಧತೆ ಮುಗಿದಿದೆ ಎಂದು ಹೇಳಿದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಅಧಿಕೃತ ಸರ್ಕಾರಿ ಕಾರ್ಯಕ್ರಮವಾಗಿ ಕೈವಾರ ತಾತಯ್ಯ ಜಯಂತಿಯನ್ನು ಆಚರಿಸಲು ನಿರ್ಧರಿಸಿದ್ದು, ಕಾಲಜ್ಞಾನಿ ಶ್ರೀ ಯೋಗಿನಾರೇಯಣ ಯತೀಂದ್ರರ ಚರಿತ್ರೆ ಜಿಲ್ಲೆಯ ಹಲವು ಜನತೆಗೆ ತಿಳಿಸುವ ಸಲುವಾಗಿ ಕೈವಾರದಿಂದ ಕೈವಾರ ತಾತಯ್ಯ ಚರಿತ್ರೆ ಪುಸ್ತಕ ತರಿಸಿ ಉಚಿತವಾಗಿ ನೀಡಲಾಗುವದು.

ಇದೀಗ ಸರ್ಕಾರಿ ಆಚರಣೆಯಾಗಿ ಬಜೆಟ್ ಘೋಷಣೆ ಹಿನ್ನೆಲೆ ತಾ.೨೭ ರಂದು ರಾಜ್ಯಾದ್ಯಂತ ಕೈವಾರ ತಾತಯ್ಯ ಜಯಂತಿ ಆಚರಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಕೊಡಗು ಬಲಿಜ ಸಮಾಜ, ಮಡಿಕೇರಿ ತಾಲೂಕು ಬಲಿಜ ಸಮಾಜ ಸಹಭಾಗಿತ್ವದಲ್ಲಿ ಅಲ್ಲಿನ ಪತ್ರಿಕಾ ಭವನದಲ್ಲಿ ನಡೆಯಲಿದ್ದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಕೆ.ಟಿ.ದರ್ಶನ್, ಬಲಿಜ ಮುಖಂಡರಾದ ಟಿ.ಪಿ.ರಮೇಶ್, ಕೊಡಗು ಬಲಿಜ ಸಮಾಜ ಉಪಾಧ್ಯಕ್ಷ ಟಿ.ವಿ.ಲೋಕೇಶ್, ಮಡಿಕೇರಿ ತಾ.ಬಲಿಜ ಸಮಾಜದ ಅಧ್ಯಕ್ಷೆ ಮೀನಾಕ್ಷಿ ಕೇಶವ್, ಸಮಾಜದ ನಿರ್ದೇಶಕರಾದ ಪದ್ಮಾವತಿ ಟಿ.ಎಂ.ಪದ್ಮಾವತಿ, ಟಿ.ಎಲ್.ಸುಮಾ, ಲೋಕನಾಥ್ ಮುಂತಾದವರ ಸಹಕಾರದಲ್ಲಿ ನೆರವೇರಲಿದೆ.

ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್.ಪ್ರಶಾಂತ್ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ಕಾಮತ್ ನವಮಿ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದ್ದು, ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಮಾಜಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಎಸ್.ಎನ್.ಜಯರಾಮ್, ಕಿಲನ್ ಗಣಪತಿ, ಕೊಲ್ಲೀರ ಬೋಪಣ್ಣ,ಹಿರಿಯ ಪತ್ರಕರ್ತರಾದ ಜೆ.ಸೋಮಣ್ಣ, ಸಮಾಜ ಸೇವಕ ಕೊಲ್ಲೀರ ಗೋಪಿ ಚಿಣ್ಣಪ್ಪ, ಎನ್.ಎಸ್.ಕಂದಾದೇವಯ್ಯ, ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್, ಪ್ರ.ಕಾರ್ಯದರ್ಶಿ ಗೀತಾನಾಯ್ಡು, ನಿರ್ದೇಶಕರಾದ ವಿಜಯ್, ಶ್ಯಾಮಲಾ ಮುಂತಾದವರು ಭಾಗವಹಿಸಲಿದ್ದಾರೆ.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜರುಗುವ ಕಾರ್ಯಕ್ರಮವನ್ನು ತಹಶೀಲ್ದಾರ್ ಎನ್.ಎಸ್.ಪ್ರಶಾಂತ್ ಉದ್ಘಾಟಿಸಲಿದ್ದಾರೆ. ಪೊನ್ನಂಪೇಟೆ ಅಟೋ ಮತ್ತು ವಾಹನ ಚಾಲಕರು, ಮಾಲೀಕರು ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಪ್ಪ, ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಪುಳಿಂಜನ ಪೂವಯ್ಯ, ಉಪಾಧ್ಯಕ್ಷರಾದ ಪಡಿಕಲ್ ಕುಸುಮಾವತಿ, ಟಾಟು ಮೊಣ್ಣಪ್ಪ, ಟಿ.ಆರ್.ವಿಜಯ, ಶರತ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ವೀರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಸಮೀಪದ ಕೋರ್ಟ್ ಹಾಲ್‌ನಲ್ಲಿ ಕಾರ್ಯಕ್ರಮ ನೆರವೇರಲಿದ್ದು, ಅಕ್ರಮ - ಸಕ್ರಮ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಕಸಾಪ ವೀರಾಜಪೇಟೆ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ, ಪ.ಪಂ.ಅಧ್ಯಕ್ಷೆ ಸುಶ್ಮಿತಾ, ಪೆರುಂಬಾಡಿಯ ಸುಶೀಲ್ ದೇವಯ್ಯ, ಅಶೋಕ್, ತುಳಸಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ನಾಪೋಕ್ಲು ಕೊಡಗು ಬಲಿಜ ಸಮಾಜ ನಿರ್ದೇಶಕಿ ಟಿ.ವಿ.ಭವಾನಿ, ಆಶಾ ನೇತೃತ್ವದಲ್ಲಿ ಕೈವಾರ ತಾತಯ್ಯ ಜಯಂತ್ಯೋತ್ಸವ ಅಲ್ಲಿನ ಕಕ್ಕುಂದ ಕಾಡು ಶ್ರೀ ಲಕ್ಷಿ÷್ಮ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಶಿರಂಗಾಲದಲ್ಲಿ ಸಮಾಜದ ನಿರ್ದೇಶಕ ಕುಮಾರ್ ಹಾಗೂ ಶನಿವಾರಸಂತೆ ಮಹಿಳಾ ಸಮಾಜದಲ್ಲಿ ಉಪಾಧ್ಯಕ್ಷೆ ಗೀತಾ ಹರೀಶ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.