ಸೋಮವಾರಪೇಟೆ, ಮಾ. ೨೫: ಆಲೂರುಸಿದ್ದಾಪುರದ ಮನೆಹಳ್ಳಿ ಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಜ್ಯಮಟ್ಟದ ಸಾವಯವ ಕೃಷಿ ಸಮ್ಮೇಳನ, ದೇಸೀ ಗೋವುಗಳ ಪ್ರದರ್ಶನ, ಚಿಕಿತ್ಸೆ ಕಾರ್ಯಕ್ರಮದ ಆವರಣದಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದ ಹಿಂದೂಯೇತರ ವ್ಯಾಪಾರಿಗಳ ಅಂಗಡಿಗಳನ್ನು ಭಜರಂಗದಳದ ಕಾರ್ಯಕರ್ತರು ತೆರವುಗೊಳಿಸಿದರು.

ಮಠದ ವತಿಯಿಂದ ಸಮ್ಮೇಳನ ಆಯೋಜಿಸಿ ಗೋ ಸಂತತಿ ಉಳಿವು, ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದರು. ಸಮ್ಮೇಳನದ ಹಿನ್ನೆಲೆ ಹತ್ತಾರು ಅಂಗಡಿಗಳನ್ನು ತೆರೆಯಲಾಗಿದ್ದು, ಇದರಲ್ಲಿ ೬ ಮಂದಿ ಹಿಂದೂಯೇತರ ವ್ಯಾಪಾರಸ್ಥರು ಅಂಗಡಿ ಹಾಕಿದ್ದರು. ಇದನ್ನು ಗಮನಿಸಿದ ಭಜರಂಗದಳದ ಕಾರ್ಯಕರ್ತರು, ಮಠದ ಆವರಣದಲ್ಲಿ ನೀವುಗಳು ವ್ಯಾಪಾರ ನಡೆಸುವುದು ಬೇಡ. ಮೊನ್ನೆಯಷ್ಟೇ ಹೈಕೋರ್ಟ್ ಆದೇಶದ ವಿರುದ್ಧ

(ಮೊದಲ ಪುಟದಿಂದ) ಅಂಗಡಿಮುAಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದೀರಿ. ಸಂವಿಧಾನದತ್ತವಾಗಿ ಕಾರ್ಯನಿರ್ವ ಹಿಸುವ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಿಮಗೆ ನಂಬಿಕೆಯಿಲ್ಲ. ಈಗ ಯಾಕೆ ಹಿಂದೂ ಸಮಾಜಕ್ಕೆ ಸೇರಿದ ಮಠದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡು ಅಂಗಡಿಗಳನ್ನು ತೆರವುಗೊಳಿಸಿದರು.

ಸಮ್ಮೇಳನದ ಹಿನ್ನೆಲೆ ಮಠದ ಆವರಣದಲ್ಲಿ ವ್ಯಾಪಾರಸ್ಥರು ಕಲ್ಲಂಗಡಿ, ಪುರಿ, ತಿಂಡಿ, ಕಬ್ಬಿನಹಾಲು, ಪ್ಲಾಸ್ಟಿಕ್ ಆಟಿಕೆಗಳ ಅಂಗಡಿಗಳನ್ನು ಹಾಕಿದ್ದರು. ಭಜರಂಗದಳದ ಕಾರ್ಯಕರ್ತರ ಆಕ್ಷೇಪಣೆ ಹಿನ್ನೆಲೆ ಎಲ್ಲಾ ಅಂಗಡಿಗಳನ್ನು ತೆರವು ಮಾಡಿದರು. ಈ ಸಂದರ್ಭ ಭಜರಂಗದಳ ತಾಲೂಕು ಸಂಚಾಲಕ ನೇಗಳ್ಳೆ ಜೀವನ್, ಪ್ರಮುಖರಾದ ಕಿಬ್ಬೆಟ್ಟ ಮಧು, ಪ್ರದೀಪ್, ತನ್ಮಯ್, ಸತ್ಯ, ನಿಶ್ಚಿತ್, ವಿಶ್ವ ಸೇರಿದಂತೆ ಇತರರು ಇದ್ದರು.