ಮಡಿಕೇರಿ,ಮಾ.೨೫: ಎಲ್ಲ ಕಡೆಗಳಲ್ಲೂ.., ಎಲ್ಲಿ ಹೋದರೂ., ಅಷ್ಟೇ ಏಕೇ..? ಸ್ವಂತ ಮನೆಯಲ್ಲಿಯೂ ತಾತ್ಸಾರಕ್ಕೆ ತುತ್ತಾಗುವ ವಿಶೇಷ ಚೇತನ ಮಕ್ಕಳಲ್ಲಿ ಹೊಸತೊಂದು ಚೈತನ್ಯದ ಚಿಲುಮೆ ಮೂಡಿತು., ತಮಗಿಷ್ಟ ಬಂದ ಎಲೆಗಳನ್ನು ಹೆಕ್ಕುತ್ತಾ., ಅವುಗಳನ್ನ ಜೋಪಾನವಾಗಿ ಕೈಯ್ಯಲ್ಲಿ ಹಿಡಿದು ತಮ್ಮೆದುರಿಗೆ ಇದ್ದ ಕಲಾವಿದ ಬಣ್ಣದ ಚಿತ್ತಾರ ರಚಿಸುತ್ತಿದ್ದುದನ್ನ ಏಕಾಗ್ರತೆಯಿಂದ ನೋಡುತ್ತಾ.., ತಾವೂ ರಚನೆ ಮಾಡಿ ಸಂಭ್ರಮಿಸಿದರು.., ಮನಸ್ಸಿನಲ್ಲಿ ಮೂಡಿದ ಸಂಶಯಗಳಿಗೆ ತಮ್ಮದೇ ಧಾಟಿಯಲ್ಲಿ ಪ್ರಶ್ನೆ ಮಾಡಿ ಉತ್ತರ ಕಂಡುಕೊAಡು ಹೇಳಿಕೊಟ್ಟ ಗುರುಗಳಿಗೆ ನಿಷ್ಕಲ್ಮಶ ಮನಸ್ಸಿನಿಂದ ಧನ್ಯವಾದ ಹೇಳಿ ಮನಸಾರೆ ನಕ್ಕರು..!
ಇಂತಹ ಒಂದು ಹೃದಯಸ್ಪರ್ಶಿ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಮಡಿಕೇರಿಯ ಮಂಗಳಾದೇವಿ ನಗರದಲ್ಲಿರುವ ‘ದಿ ವ್ಹೀಲ್ ಕೆಫೆ’. ಸಮಾಜದಲ್ಲಿ ಅನಾದರಕ್ಕೊಳ ಗಾಗುತ್ತಿರುವ, ನಿರ್ಲಕ್ಷö್ಯಕ್ಕೆ ಒಳಗಾಗುತ್ತಿರುವ ವಿಶೇಷ ಚೇತನ ಮಕ್ಕಳಿಗೂ
(ಮೊದಲ ಪುಟದಿಂದ) ಸಮಾಜದಲ್ಲಿ ಸಮಾನ ರೀತಿಯ ಸ್ಥಾನ ಮಾನ ಕಲ್ಪಿಸುವದರೊಂದಿಗೆ ಅವರುಗಳಲ್ಲಡಗಿರುವ ಪ್ರತಿಭೆಗಳನ್ನು ಹೊತರುವ ನಿಟ್ಟಿನಲ್ಲಿ ‘ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ‘ಕಾವೇರಿ ಹೀಯರಿಂಗ್ ಅಂಡ್ ಸ್ಪೀಚ್ ಕ್ಲಿನಿಕ್’ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಸೈನೊಟೈಪ್ ಕಾರ್ಯಾಗಾರ’ದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಪರ್ಚುನಿಟಿ ವಿಭಾಗದ ವಿಶೇಷ ಚೇತನ ಮಕ್ಕಳು ಭಾಗವಹಿಸಿ ವಿಶೇಷ ಕಲೆಯ ಬಗ್ಗೆ ತಿಳಿದುಕೊಂಡರು.
ಎಲೆಗಳನ್ನು ಹೆಕ್ಕಿ ತಂದರು..!
ಮಕ್ಕಳೆಲ್ಲರನ್ನೂ ಒಟ್ಟು ಸೇರಿಸಿ ಸ್ವ ಪರಿಚಯ ಮಾಡಿಕೊಂಡ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಮೈಸೂರಿನ ಫ್ರೀಲ್ಯಾನ್ಸ್ ಛಾಯಾಚಿತ್ರ ಗ್ರಾಹಕ ಹಾಗೂ ಸಿನಿಮ್ಯಾ ಟೋಗ್ರಾಫರ್ ಸುಮುಖ್ ಅವರು ಮಕ್ಕಳಲ್ಲಿ ಎಲೆಗಳನ್ನು ಆಯ್ದು ತರುವಂತೆ ಹೇಳಿದರು. ಶಾಲೆಯ ಶಿಕ್ಷಕಿಯರ ಮಾರ್ಗದರ್ಶನ ದೊಂದಿಗೆ ಕೆಫೆಯ ಆವರಣದಲ್ಲಿದ್ದ ಒಣ ಹಾಗೂ ಹಸಿ ಎಲೆಗಳನ್ನು ಹೆಕ್ಕಿ ತಂದರಲ್ಲದೆ, ‘ಇದು ನನ್ನದು, ನಿನ್ನದು ಎಲ್ಲಿ..?’ ಎಂದುಕೊAಡು ಹಿಡಿದುಕೊಂಡರು.
ಪೋಸ್ಟ್ ಕಾರ್ಡಿನಲ್ಲಿ ಚಿತ್ತಾರ..!
ನಂತರ ಅಲ್ಲಿನ ಕೋಣೆಯೊಂದರಲ್ಲಿ ಮಕ್ಕಳಿಗೆ ಚಿತ್ರ ರಚನೆ ಬಗ್ಗೆ ಹೇಳಿಕೊಡಲಾಯಿತು. ಹಾನಿಕಾರಕವಲ್ಲದ ಫೆರಿಕ್ ಅಮೋನಿಯಂ ಸೈಟ್ರೇಟ್ ಹಾಗೂ ಪೊಟಾಶಿಯಂ ಫೆರಿ ಸೈನೈಡ್ ಎಂಬ ರಾಸಾಯನಿಕವನ್ನು ನೀರಿನಿಂದ ಮಿಶ್ರಣ ಮಾಡುವಾಗ ಕೆಂಪು ಹಾಗೂ ಕಂದು ಬಣ್ಣದಿಂದ ಕೂಡಿದ್ದ ಮಿಶ್ರಣ ಬೇರೊಂದು ಬಣ್ಣಕ್ಕೆ ತಿರುಗುವದನ್ನು ಕುತೂಹಲಭರಿತರಾಗಿ ನೋಡಿ ದರಲ್ಲದೆ, ಬಣ್ಣವನ್ನು ಗುರುತಿಸಿ ಖುಷಿ ಪಟ್ಟರು.
ನಂತರ ಅದನ್ನು ಪೋಸ್ಟ್ ಕಾರ್ಡಿಗೆ ಹಚ್ಚುವಾಗ ಅದು ಹಳದಿ ಬಣ್ಣಕ್ಕೆ ತಿರುಗಿದಾಗ ಬೆರಗಾದರು. ಅದು ಕೊಂಚ ಒಣಗಿದ ಬಳಿಕ ಮಾರ್ಗದರ್ಶಿ ಸುಮುಖ್ ಹೇಳಿಕೊಟ್ಟಂತೆ ತಾವುಗಳು ತಂದಿದ್ದ ಎಲೆಗಳನ್ನು ಕಾರ್ಡಿನ ಮೇಲೆ ಅಂಟಿಸಿ ‘ತಾವೇ ರಚಿಸಿದ ಚಿತ್ರ’ ಎಂದು ಶಿಕ್ಷಕಿಯರಿಗೆ, ಅಲ್ಲಿದ್ದವರಿಗೆ ತೋರಿಸುತ್ತಾ ಸಂಭ್ರಮಿಸಿದರು.
ಬಳಿಕ ಆ ಚಿತ್ರಗಳನ್ನು ಗಾಜಿನಿಂದ ಮುಚ್ಚಿ ಬಿಸಿಲಿನಲ್ಲಿಟ್ಟಾಗ ಅದು ಹಸಿರು ಬಣ್ಣಕ್ಕೆ ತಿರುಗಿ ಕೊನೆಯಲ್ಲಿ ನೀಲಿ ಬಣ್ಣವಾದಾಗ ಮಕ್ಕಳಲ್ಲಿ ಅಚ್ಚರಿಯೋ ಅಚ್ಚರಿ..! ಎಲ್ಲರೂ ಸುತ್ತುಗೂಡಿ ಬಣ್ಣ ಬದಲಾಗುವದನ್ನು ತದೇಕ ಚಿತ್ತದಿಂದ ನೋಡತೊಡಗಿದರು.
ಅಂತಿಮವಾಗಿ ಅವರುಗಳು ರಚನೆ ಮಾಡಿದ ಚಿತ್ರಗಳು ಕಾರ್ಡಿನಲ್ಲಿ ಮೂಡಿಬಂದಾಗ ಅವರುಗಳ ಸಂಭ್ರಮ ಹೇಳತೀರ ದ್ದಾಗಿತ್ತು..! ಅಲ್ಲಿಯೇ ಸಹಭೋಜನ ಮಾಡಿ ಹೊರಡುವಾಗ ಎಲ್ಲರಿಗೂ ಧನ್ಯತಾ ಭಾವದೊಂದಿಗೆ ‘ಟಾಟ ಮಾಡಿ ಬೈ’ ಹೇಳಿದರು. ಇದೇ ಸಂದರ್ಭ ಮಕ್ಕಳಿಗೆ ಏಕಾಗ್ರತೆಯನ್ನು ಮೂಡಿಸುವ ಕೆಲವೊಂದು ಆಟಗಳನ್ನೂ ಆಡಿಸಲಾಯಿತು.
ಮಾರಾಟದ ವ್ಯವಸ್ಥೆ
ವಿಶೇಷ ಮಕ್ಕಳ ಬಗ್ಗೆ ಇರುವ ನಿರ್ಲಕ್ಷö್ಯ ಧೋರಣೆಯನ್ನು ಹೋಗಲಾಡಿಸಿ ಅವರುಗಳನ್ನು ಕೂಡ ಸಮಾಜದಲ್ಲಿ ಸಮಾನವಾಗಿ ಕಾಣಬೇಕಿದೆ, ಅವರುಗಳಲ್ಲಿನ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳ ಲಾಗಿದೆ. ಇದರಲ್ಲಿ ಮಕ್ಕಳು ರಚಿಸಿದ ಚಿತ್ರಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಕೆಫೆಯಲ್ಲಿ ಮಾರಾಟಕ್ಕಿಡ ಲಾಗುವದು. ಅದರಲ್ಲಿ ಬರುವ ಹಣವನ್ನು ಆ ಶಾಲೆಗೆ ನೀಡಲಾಗು ವುದು. ಅಲ್ಲದೆ, ಕಲಾವಿದ ಸುಮುಖ್ ಬಾಲಭವನ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರ ಗಳಲ್ಲಿಯೂ ಇದೇ ರೀತಿಯ ತರಬೇತಿ ನೀಡಲಿದ್ದು ಅವರುಗಳ ರಚನೆಯನ್ನೂ ಕೂಡ ಮಾರಾಟಕ್ಕಿಟ್ಟು ಅದರ ಹಣವನ್ನು ಆಯಾ ಸಂಸ್ಥೆಗಳಿಗೆ ನೀಡಲಾಗುವದು ಎಂದು ಕಾವೇರಿ ಹೀಯರಿಂಗ್ ಅಂಡ್ ಸ್ಪೀಚ್ ಕ್ಲಿನಿಕ್‌ನ ಆಡಿಯೋಲಾಜಿಸ್ಟ್ ಮುಂಡೋಟಿರ ಅಚ್ಚಯ್ಯ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಸುಮುಖ್ ಅವರೊಂದಿಗೆ ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ನ ದೀಪಿಕಾ ಅಪ್ಪಯ್ಯ, ಸ್ವಯಂಸೇವಕರು ಗಳಾದ ಅಹಲ್ಯ, ಬಾಷಾ ಹಾಗೂ ಮಾತಿನ ತಜ್ಞೆ ಅನುರೂಪ್, ವಿದ್ಯಾಲಯದ ಶಿಕ್ಷಕಿಯರು, ಸಿಬ್ಬಂದಿಗಳು ಸಹಕಾರ ನೀಡಿದರು.
?ಕುಡೆಕಲ್ ಸಂತೋಷ್