ಸೋಮವಾರಪೇಟೆ, ಮಾ. ೨೫: ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಳ್ಳಿ ಗ್ರಾಮದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಕಳೆದ ೩ ದಿನಗಳಿಂದ ಸಂಭ್ರಮದ ವಾತಾವರಣ. ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಮಹಾಸ್ವಾಮೀಜಿಗಳ ಅಭಿಲಾಷೆ, ಗೋ ಸಂತತಿಯ ಉಳಿವು, ಸಾವಯವ ಕೃಷಿ ಬಗೆಗಿನ ಕಾಳಜಿಯ ಮೂರ್ತರೂಪವಾಗಿ ಮೂಡಿಬಂದ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನವು ಹಲವಾರು ವಿಶೇಷತೆಗಳೊಂದಿಗೆ ಅರ್ಥಪೂರ್ಣವಾಗಿ ಸಂಪನ್ನಗೊAಡಿತು.

ಕೊಡಗು ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ರೈತರು, ಕೃಷಿಕರು ಸಮ್ಮೇಳನದಲ್ಲಿ ಭಾಗಿಯಾಗುವ ಮೂಲಕ ದೇಶೀ ಗೋವುಗಳ ಮಹತ್ವ, ಸಾವಯವ ಕೃಷಿಯ ಅನಿವಾರ್ಯತೆಯ ಬಗ್ಗೆ ಹಲವಷ್ಟು ವಿಚಾರಗಳನ್ನು ಅರಿಯಲು ಈ ವೇದಿಕೆ ನೆರವಾಯಿತು.

ಅಂತಿಮವಾಗಿ ಗೋವುಗಳ ರಕ್ಷಣೆ, ಸಾವಯವ ಕೃಷಿಯನ್ನು ಉಳಿಸಿಕೊಳ್ಳುವ ಸಂಕಲ್ಪದೊAದಿಗೆ ರೈತಾಪಿ ವರ್ಗ ಸಮ್ಮೇಳನದಿಂದ ತೆರಳಿತು. ಆ ಮೂಲಕ ಹತ್ತುಹಲವು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ನೆರವೇರಿದ ರಾಜ್ಯಮಟ್ಟದ ಸಮ್ಮೇಳನ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಕಂಡಿತು.

ಮಠವೊAದು ನೇತೃತ್ವ ವಹಿಸಿಕೊಂಡು ನಡೆಸಿದ ಪ್ರಪ್ರಥಮ ಸಮ್ಮೇಳನಕ್ಕೆ ಕೃಷಿ ಮತ್ತು ಕೃಷಿ ಸಂಬAಧಿತ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳು ಸಹಯೋಗ ವಹಿಸಿದ್ದವು.

ಮನೆಹಳ್ಳಿ ಮಠದ ಅನತಿ ದೂರದಲ್ಲಿರುವ ಖಾಸಗಿ ಜಾಗವನ್ನು ಸಮತಟ್ಟುಗೊಳಿಸಿ ಭವ್ಯವೇದಿಕೆ ನಿರ್ಮಾಣ ಮಾಡಿ, ಸನಿಹದಲ್ಲಿಯೇ ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಉತ್ಪಾದನೆಯ ಪ್ರಾತ್ಯಕ್ಷಿಕೆ, ಉತ್ತಮ ರಾಸುಗಳ ಪ್ರದರ್ಶನ ಸೇರಿದಂತೆ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸಿದ ಮಠದ ಕಾರ್ಯವು, ರೈತಾಪಿ ವರ್ಗದ ಮಂದಿಯಲ್ಲಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

ಕೃಷಿ, ತೋಟಗಾರಿಗೆ ಸೇರಿದಂತೆ ಸಂಶೋಧನಾ ಕೇಂದ್ರಗಳು ಅಳವಡಿಸಿದ್ದ ಕೃಷಿ ಯಂತ್ರೋಪಕರಣ ಪ್ರದರ್ಶನ ಮತ್ತು ಮಾರಾಟಕ್ಕೆ

ಅಧಿಕಾರಿಗಳ ಅಡ್ಡಗಾಲಿನಿಂದ ಉಚಿತ ವಿದ್ಯುತ್ ತಡ - ರಂಜನ್

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಕೊಡಗಿನ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸಬೇಕೆಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭವೇ ಪ್ರಯತ್ನ ನಡೆದಿತ್ತು. ನೆರೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆಗಾರರಿಗೆ ಉಚಿತ ವಿದ್ಯುತ್ ಇದೆ. ಆದರೆ ಕೊಡಗಿನ ಕಾಫಿಗೆ ಉಚಿತ ವಿದ್ಯುತ್ ಇಲ್ಲ. ಈ ಬಗ್ಗೆ ಕಳೆದ ೬ ವರ್ಷಗಳ ಹಿಂದೆಯೇ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಜೆಟ್‌ನಲ್ಲಿ ಘೋಷಣೆ ಮಾಡಿದರೂ ಸಹ ಕೆಲ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಈ ಬಾರಿಯೂ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳು ಬಜೆಟ್‌ನಲ್ಲಿ ಘೋಷಣೆಯಾಗದಂತೆ ಮಾಡಿದ್ದರು. ಈ ಬಗ್ಗೆ ವಿಚಾರಿಸಿದ ಸಂದರ್ಭ ಉಚಿತ ವಿದ್ಯುತ್ ಬೇಡಿಕೆ ಪ್ರಸ್ತಾಪ ತಿರಸ್ಕರಿಸಿರುವುದು ತಿಳಿದುಬಂತು. ಈ ಹಿನ್ನೆಲೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಉಚಿತ ವಿದ್ಯುತ್ ಒದಗಿಸಲಾಗಿದೆ. ಆ ಮೂಲಕ ಜಿಲ್ಲೆಯ ಬೆಳೆಗಾರರು ನೆಮ್ಮದಿಯಿಂದ ಉಸಿರಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಕುಡಿಯುವ ನೀರಿಗೂ ಅನುಕೂಲ ಕಲ್ಪಿಸಿದೆ. ರಾಜ್ಯ ಸರ್ಕಾರದ ಈ ಕೊಡುಗೆಯನ್ನು ರೈತರು ಸ್ಮರಿಸಿಕೊಳ್ಳಬೇಕು ಎಂದರು.ದೇಶೀ ತಳಿಯ ಗೋವುಗಳ ಪ್ರದರ್ಶನ ಆಯೋಜಿಸಿ ವಿಜೇತರಿಗೆ ನಗದು ಹಾಗೂ ಪಾರಿತೋಷಕ ವಿತರಿಸುವ ಮೂಲಕ ಇನ್ನಷ್ಟು ಪ್ರೋತ್ಸಾಹ ನೀಡಲಾಯಿತು. ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಸ್ಥಳೀಯವಾಗಿ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಇದರೊಂದಿಗೆ ಸಾವಯವ ಪದ್ದತಿಯಲ್ಲಿಯೇ ಅಡುಗೆ ತಯಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ೪೦ ವರ್ಷ ಒಳಪಟ್ಟು ಹಾಗೂ ಮೇಲ್ಪಟ್ಟ ಮಹಿಳೆಯರಿಗೆ ರೊಟ್ಟಿ ಮಾಡುವ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಸಮ್ಮೇಳನದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಮಂದಿಯೂ ಭಾಗವಹಿಸಿದ್ದರು. ಮನೆಯಲ್ಲಿಯೇ ತಯಾರಿಸಿದ ವಿವಿಧ ಬಗೆಯ ಕರಕುಶಲ ವಸ್ತುಗಳು, ಕೈಮಗ್ಗದ ವಸ್ತçಗಳು ಎಲ್ಲರ ಗಮನ ಸೆಳೆದವು.

ಕಳೆದ ೧೦ ವರ್ಷಗಳ ಹಿಂದೆಯೇ ಮಠದಲ್ಲಿ ಗೋಶಾಲೆ ಸ್ಥಾಪಿಸುವ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಿರುವ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು, ತಮ್ಮ ಮಠದ ಗೋ ಶಾಲೆಯ ದಶಮಾನೋತ್ಸವ ನಿಮಿತ್ತ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನ ಆಯೋಜಿಸಿದ್ದರು.

ಸಮ್ಮೇಳನದಲ್ಲಿ ಪಶು ವೈದ್ಯಕೀಯ ಶಿಬಿರ, ಸಾವಯವ ಕೃಷಿ ಮತ್ತು ಗವ್ಯೋತ್ಪನ್ನಗಳ ಮಹತ್ವ, ಉತ್ಪಾದನೆ ಕುರಿತು ಪ್ರಾತ್ಯಕ್ಷಿಕೆ, ಪ್ರಾದೇಶಿಕ ಕ್ರೀಡೆಗಳು, ಗೋ ಸಂಬAಧಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕೃಷಿಕರ ಏಳಿಗೆಯಲ್ಲಿ ಶ್ರೀಮಠದ ಸಂಕಲ್ಪವನ್ನು ತೆರೆದಿಟ್ಟಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗೋವುಗಳ ಮಹತ್ವವನ್ನು ಮನುಷ್ಯ ಅರಿತುಕೊಳ್ಳಬೇಕು. ಗೋವುಗಳ ಬಗ್ಗೆ ಮಾತನಾಡುವವರು ಅವುಗಳನ್ನು ಸಲಹಬೇಕು. ಕೇವಲ ಭಾಷಣದಿಂದ ಮಾತ್ರ ಗೋ ತಳಿ ಉಳಿವು ಸಾಧ್ಯವಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀಮಠವು ಮಾಡಿದೆ ಎಂದು ಬಣ್ಣಿಸಿದರು.

ಇಂದಿನ ದಿನಗಳಲ್ಲಿ ಭೂ ಸವಕಳಿ ತಡೆಯಬೇಕು. ಇದಕ್ಕೆ ವಿಜ್ಞಾನ ತಂತ್ರಜ್ಞಾನದಿAದ ಸಾಧ್ಯವಿಲ್ಲ. ಸಾವಯವ ಕೃಷಿಯಿಂದ ಮಾತ್ರ ಇದನ್ನು ತಡೆಗಟ್ಟಬಹುದು. ಗುಡಿ ಕೈಗಾರಿಕೆಗಳು ಉಳಿಯಬೇಕು. ಗ್ರಾಮೀಣ ಪ್ರದೇಶಗಳು ಗೋವುಗಳ ಆರೈಕೆಯ ಕೇಂದ್ರಗಳಾದರೆ ಆರೋಗ್ಯ ಕೇಂದ್ರಗಳ ಸ್ಥಾಪನೆಯ ಅಗತ್ಯ ಇರುವುದಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ರಾಮನಗರ ಮಾಗಡಿ ಕಂಚುಗಲ್ಲು ಬಂಡೆಮಠದ ಶ್ರೀ ಚರಮೂರ್ತಿ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಾವಯವ ಕೃಷಿಗೆ ಕೇಂದ್ರ ಸರ್ಕಾರವೂ ಹೆಚ್ಚು ಒತ್ತು ನೀಡುತ್ತಿದೆ. ರಾಸಾಯನಿಕಗಳನ್ನು ದೂರ ಮಾಡಿ ಸ್ಥಳೀಯವಾಗಿ ಗೊಬ್ಬರಗಳನ್ನು ಉತ್ಪಾದಿಸುವುದು ಅವಶ್ಯವಾಗಿದೆ ಎಂದರು.

ಆಹಾರ ಪದ್ದತಿಯು ಮನುಷ್ಯನ ಆರೋಗ್ಯವನ್ನು ನಿರ್ಧರಿಸುತ್ತದೆ. ಆದಾಯ ಗಳಿಸುವ ಭರದಲ್ಲಿ ದೇಶೀ ಗೋವುಗಳ ಬದಲಿಗೆ ಜೆರ್ಸಿ ತಳಿಯ ಗೋವಿನ ಹಾಲನ್ನು ಬಳಸುತ್ತಿದ್ದು, ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಂಪಾದನೆಯ ದೃಷಿಯಿಂದಾಗಿ ಎಲ್ಲವನ್ನೂ ನೋಡಿದರೆ ಆಯಸ್ಸು ಕ್ಷೀಣಿಸುತ್ತಿದೆ. ಇಂದು ಕಡಿಮೆ ಸಮಯದಲ್ಲಿ ಬೆಳೆಯುತ್ತಿದ್ದೇವೆ, ಅಷ್ಟೇ ಕಡಿಮೆ ಸಮಯದಲ್ಲಿ ಹೋಗುತ್ತಿದ್ದೇವೆ ಎಂದು ಜಾಗೃತಿಯ ನುಡಿಯಾಡಿದರು.

ಮುದ್ದಿನ ಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಶಿಡಿಗಳಲೆ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ರಾಷ್ಟçಧರ್ಮ ಸಂಘಟನೆಯ ರಾಜ್ಯಾಧ್ಯಕ್ಷ ಸಂತೋಷ್, ಸಮಾಜ ಸೇವಕ ಸುರೇಶ್ ಸಿಂಗನಕುಪ್ಪೆ, ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ್, ಕೃಷಿ ಇಲಾಖಾ ಉಪ ನಿರ್ದೇಶಕ ಮುತ್ತುರಾಜ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಬದಾಮಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಂಕನವಾಡಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷೆ ಮಮತ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

- ವಿಜಯ್ ಹಾನಗಲ್