ಸಿದ್ದಾಪುರ, ಮಾ. ೨೪: ಸಿದ್ದಾಪುರದಲ್ಲಿ ಭಾನುವಾರ ಸಂತೆಯ ದಿನದಂದು ರಸ್ತೆ ಬದಿಯಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ತುಳಸಿ ತಿಳಿಸಿದ್ದಾರೆ.
ಸಿದ್ದಾಪುರದ ಗ್ರಾ.ಪಂ.ಯು ೨೦೨೨-೨೩ನೇ ಸಾಲಿನ ವಿವಿಧ ಹರಾಜು ಪ್ರಕ್ರಿಯೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿದ್ದಾಪುರದಲ್ಲಿ ಭಾನುವಾರದಂದು ಸಂತೆ ನಡೆಯುವ ದಿನದಂದು ಕೆಲವು ವ್ಯಾಪಾರಿಗಳು ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ಮಾರುಕಟ್ಟೆ ರಸ್ತೆಯಲ್ಲಿ ವಾಹನ ಸಂಚರಿಸಲು ಸಮಸ್ಯೆ ಆಗುತ್ತಿದೆ.
ಈ ಬಗ್ಗೆ ಈ ಹಿಂದೆ ಸಿದ್ದಾಪುರ ಪೊಲೀಸ್ ಠಾಣೆಯಿಂದಲೂ ರಸ್ತೆ ಬದಿಯಲ್ಲಿ ಭಾನುವಾರದಂದು ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ತಿಳಿಸಲಾಗಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ೧ ರಿಂದ ಸಿದ್ದಾಪುರ ಮಾರುಕಟ್ಟೆಗೆ ತೆರಳುವ ಪೊಲೀಸ್ ಠಾಣೆಯ ಸಮೀಪದಿಂದ ಮೇಲ್ಭಾಗದಿಂದ ಮಾತ್ರ ರಸ್ತೆಯ ಬದಿಯಲ್ಲಿ ಅವಕಾಶ ನೀಡಿದ್ದು, ಇದೇ ರೀತಿ ಸಿನಿಮಾ ಮಂದಿರದ ರಸ್ತೆಯಲ್ಲಿ ಕೂಡ ಮೇಲ್ಭಾಗದಿಂದಲೇ ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆಂದರು. ಮುಂದಿನ ದಿನಗಳಲ್ಲಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಇರುವ ಅಂಗಡಿಗಳನ್ನು ತೆರವುಗೊಳಿಸುವುದಾಗಿ ಮಾಹಿತಿ ನೀಡಿದರು.