ಮುಳ್ಳೂರು, ಮಾ. ೨೪: ರೋಟರಿ ಕ್ಲಬ್ ಝೋನ್ ೬ರ ೮೩ ಕ್ಲಬ್‌ಗಳು ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ಕಳೆದ ೫ ವರ್ಷಗಳಲ್ಲಿ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದ ಹಿನ್ನೆಲೆಯಲ್ಲಿ ರೋಟರಿ ಪಬ್ಲಿಕ್ ಇಮೇಜ್‌ನ ಜಾಥಾವು ೩ ಜಿಲ್ಲೆಗಳನ್ನು ತಲುಪಿದ ನಂತರ ಸಮೀಪದ ಶನಿವಾರಸಂತೆಗೆ ಆಗಮಿಸಿತು.

ಪಟ್ಟಣದ ಕೆಆರ್‌ಸಿ ವೃತ್ತಕ್ಕೆ ಆಗಮಿಸಿದ ರೋಟರಿ ಪಬ್ಲಿಕ್ ಇಮೇಜ್ ಜಾಥಾವನ್ನು ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಉದ್ಘಾಟಿಸಿದರು. ಜಾಥಾ ವಾಹನದ ಜವಾಬ್ದಾರಿ ನಿರ್ವಹಿಸಿದ ಸತೀಶ್ ಬೊಳ್ಳಾರ್ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಇದುವರೆಗೂ ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಝೋನ್ ೬ರ ರೋಟರಿ ವಲಯ ಕಾರ್ಯದರ್ಶಿ ಎಚ್.ಎಸ್. ವಸಂತ್‌ಕುಮಾರ್, ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯ ಎನ್.ಕೆ. ಅಪ್ಪಸ್ವಾಮಿ ರೋಟರಿ ಸಂಸ್ಥೆಯ ಸಮಾಜ ಸೇವೆ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶನಿವಾರಸಂತೆ ರೋಟರಿಯನ್ ಕೆ.ಪಿ.ಜಯಕುಮಾರ್ ರೋಟರಿ ಸಂಸ್ಥೆ, ಇದರ ಉದ್ದೇಶ, ಸಮಾಜ ಸೇವೆ ಮುಂತಾದ ರೋಟರಿ ಕ್ಲಬ್‌ನ ಧ್ಯೇಯೋದ್ದೇಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಜಾಥಾ ಕಾರ್ಯಕ್ರಮದಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಪಿ. ಮೋಹನ್, ಕಾರ್ಯದರ್ಶಿ ಎಂ.ಎಸ್. ವಸಂತ್, ರೋಟರಿ ಸದಸ್ಯರುಗಳಾದ ಚಂದ್ರಕಾAತ್, ಎಸ್.ಆರ್. ಮಧು, ಎ.ಡಿ. ಮೋಹನ್‌ಕುಮಾರ್, ಶ್ವೇತಾ ವಸಂತ್ ಹಾಜರಿದ್ದರು. ಈ ಸಂದರ್ಭ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಸಮಾಜಮಿಖಿ ಕಾರ್ಯಗಳನ್ನು ಜಾಥಾ ವಾಹನದಲ್ಲಿ ಅಳವಡಿಸಿದ ದೊಡ್ಡ ಪರದೆಯ ಮೇಲೆ ಸಾರ್ವಜನಿಕರಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಯಿತು.