ಕುಶಾಲನಗರ, ಮಾ.೨೨: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಕಾರು ಸಹಿತ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಮೂವರು ಆರೋಪಿಗಳನ್ನು ಹಾಸನ ಜಿಲ್ಲೆಯ ಕೊಣನೂರು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಶಶಿಕುಮಾರ (೩೦) ಸೋಮಶೇಖರ (೨೬) ಯೋಗೇಶ (೨೫) ಎಂಬುವವರು ಅನಿಲ್ ಕುಮಾರ್ ಎಂಬಾತನನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಕುಮಾರ್ ಎಂಬಾತ ತನ್ನ ಪತ್ನಿಯೊಂದಿಗೆ ಅನುಚಿತವಾಗಿ ನಡೆದುಕೊಂಡ ಎಂಬ ಕಾರಣಕ್ಕಾಗಿ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಶಶಿಕುಮಾರ್ ಮತ್ತು ಮೂವರು ಸೇರಿ ಅನಿಲ್ ಕುಮಾರ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿ ನಂತರ ಕಾರಿನ ಸಹಿತ
(ಮೊದಲ ಪುಟದಿಂದ) ಅರಕಲಗೂಡು ತಾಲೂಕಿನ ಕೊಣನೂರು ವ್ಯಾಪ್ತಿಯ ಹಿರೆಕೆರೆಯ ಏರಿ ಮೇಲೆ ಸುಟ್ಟು ಹಾಕಿದ ಪ್ರಕರಣ ಸಂಬAಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಅನಿಲ್ ಕುಮಾರ್ ಪಿರಿಯಾಪಟ್ಟಣ ತಾಲೂಕು ಭೂತನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ತನ್ನ ಪತ್ನಿಯೊಂದಿಗೆ ಸಲುಗೆಯಿಂದ ಇದ್ದ ಕಾರಣಕ್ಕೆ ಆರೋಪಿ ಶಶಿಕುಮಾರ್ ಮತ್ತು ಆತನ ಸ್ನೇಹಿತರು ಸೇರಿ ಅನಿಲ್ ಕುಮಾರ್‌ನನ್ನು ಮಾರ್ಚ್ ೧೪ರಂದು ರಾತ್ರಿ ಗೊಂದಿಬಸವನಹಳ್ಳಿಗೆ ಬರಮಾಡಿಕೊಂಡು ಆತನ ಕಾರಿನಲ್ಲಿ ಹಲ್ಲೆ ನಡೆಸಿ ನಂತರ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಕೆರೆ ಏರಿ ಮೇಲೆ ತಂದು ಪೆಟ್ರೋಲ್ ಹಾಕಿ ಕಾರು ಸಹಿತ ಸುಟ್ಟಿರುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ಲಭಿಸಿದೆ ಎಂದು ಹಾಸನ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಹಾಸನ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಕಳೆದ ಒಂದು ವಾರದಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದರು.
- ಸಿಂಚು
 
						