ಮಡಿಕೇರಿ, ಮಾ. ೨೨: ನ್ಯಾಷನಲ್ ವಿಂಟರ್ ಬಯಥ್ಲಾನ್ ಚಾಂಪಿಯನ್ ಶಿಪ್-೨೦೨೨ (ಸ್ಕೀಯಿಂಗ್ ಕ್ರೀಡೆ)ರಲ್ಲಿ ಕೊಡಗು ಜಿಲ್ಲೆಯ ಯುವತಿ ತೆಕ್ಕಡ ಭವಾನಿ ಅವರು ಎರಡು ವಿಭಾಗದಲ್ಲಿ ತಲಾ ಒಂದೊAದು ಬೆಳ್ಳಿ ಪದಕಗಳಿಗೆ ದ್ವಿತೀಯ ಸ್ಥಾನದೊಂದಿಗೆ ಸಾಧನೆ ತೋರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಈ ಸಾಹಸ ಕ್ರೀಡೆಯಲ್ಲಿ ಭವಾನಿ ರಾಷ್ಟಿçÃಯ ಮಟ್ಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ದಕ್ಷಿಣ ಭಾರತದಿಂದ ಈ ಸಾಧನೆ ಮಾಡಿದ ಪ್ರಥಮ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

೧೦ ಕಿ.ಮೀ. ಹಾಗೂ ೫ ಕಿ.ಮೀ.ನ ರೇಸ್‌ನಲ್ಲಿ ಇವರು ಪ್ರತ್ಯೇಕ ಎರಡು ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ. ಶೂಟಿಂಗ್ ಹಾಗೂ ಕ್ರಾಸ್‌ಕಂಟ್ರಿ ಸ್ಕೀಯಿಂಗ್ ಒಳಗೊಂಡ ಬೈಯಥ್ಲಾನ್ ಕ್ರೀಡೆ ನಡೆದಿತ್ತು.

ಹೇಗಿತ್ತು ಈ ಕ್ರೀಡೆ

ಕಡಿದಾದ ಬೆಟ್ಟ ಶ್ರೇಣಿಯಲ್ಲಿ ಜಾರುವ ಹಿಮಪಾತದ ನಡುವೆ ಕ್ರೀಡಾ ಪರಿಕರದೊಂದಿಗೆ ಸುಮಾರು ಮೂರೂವರೆ ಕೆ.ಜಿ. ಭಾರದ ರೈಫಲ್ ಸಹಿತವಾಗಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು. ೧೦ ಕಿ.ಮೀ. ಅಂತರದ ಸ್ಪರ್ಧೆಯ ನಡುವೆ ತಲಾ ೨.೫ ಕಿ.ಮೀ. ನಡುವೆ ಜಾರುತ್ತಲೇ ರೈಫಲ್‌ನಲ್ಲಿ ನಿಗದಿತ ಗುರಿಗೆ ಬುಲೆಟ್ ಹಾರಿಸಬೇಕು. ೧೦ ಕಿ.ಮೀ.ನ ಸ್ಪರ್ಧೆ ಯಲ್ಲಿ ಭವಾನಿಯ ರೈಫಲ್‌ನಿಂದ ಈ ರೀತಿ ಹಾರಿದ ಬುಲೆಟ್‌ಗಳಲ್ಲಿ ಒಟ್ಟು ೧೦ ಬುಲೆಟ್ ಪೈಕಿ ೭ ಗುರಿ ತಲುಪಿದ್ದರೆ, ೫ ಕಿ.ಮೀ. ಸ್ಪರ್ಧೆಯಲ್ಲಿ ಐದು ಬುಲೆಟ್ ಪೈಕಿ ಮೂರು ಗುರಿ ತಲುಪಿದೆ.

ಗುರಿ ತಲುಪದ ಬುಲೆಟ್‌ಗಳ ಸಂಖ್ಯೆಯAತೆ

(ಮೊದಲ ಪುಟದಿಂದ) ನಡುವೆ ಮಾಹಿತಿ ನೀಡಲಾಗುವುದು. ಇದಕ್ಕೆ ಶಿಕ್ಷೆಯ ರೀತಿಯಲ್ಲಿ ಸ್ಪರ್ಧೆಯ ಅಂತಿಮ ಹಂತದಲ್ಲಿ ನಿರ್ಮಿಸಿರುವ ಸುಮಾರು ೧೫೦ ಮೀಟರ್ ಸುತ್ತಳತೆಯ ಟ್ರಾö್ಯಕ್‌ನಲ್ಲಿ ಎಷ್ಟು ಬುಲೆಟ್ ಗುರಿ ತಲುಪಿಲ್ಲವೋ ಅಷ್ಟು ಸುತ್ತನ್ನು ಪೆನಾಲ್ಟಿ ಮಾದರಿಯಲ್ಲಿ ಪೂರೈಸಬೇಕಿದೆ. ಇದು ಈ ಸ್ಪರ್ಧೆಯ ಪರಿಯಾಗಿದೆ ಎಂದು ಭವಾನಿ ‘ಶಕ್ತಿ’ಯೊಂದಿಗೆ ಅನುಭವ ಹಂಚಿಕೊAಡರು. ಈ ಸ್ಪರ್ಧೆಗೆ ಭಾರತೀಯ ಸೇನೆಯ ಯೋಧರು ಸಹಕಾರ ನೀಡಿದ್ದಾಗಿ ಅವರು ತಿಳಿಸಿದರು.

ಪರ್ವತಾರೋಹಣದಲ್ಲಿ ಗುರುತಿಸಿಕೊಂಡಿರುವ ಭವಾನಿ ಈ ಕ್ರೀಡೆಯಲ್ಲಿ ಸಾಧನೆ ತೋರುತ್ತಿದ್ದಾರೆ. ಸ್ಕೀಯಿಂಗ್‌ನಲ್ಲಿ ನಾಳೆಯಿಂದ ನಡೆಯುವ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲೂ ಇವರು ಪಾಲ್ಗೊಳ್ಳುತ್ತಿದ್ದಾರೆ.

ನಾರ್ವೆಯಲ್ಲಿ ತರಬೇತಿ ಮುಗಿಸಿ ಮರಳಿರುವ ಇವರು ಕಳೆದ ಎರಡು ತಿಂಗಳಿನಿAದ ಜಮ್ಮು-ಕಾಶ್ಮೀರದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಭವಾನಿ ಮೂಲತಃ ನಾಪೋಕ್ಲು ಪೇರೂರು ಗ್ರಾಮದವರಾದ ತೆಕ್ಕಡ ನಂಜುAಡ ಹಾಗೂ ಪಾರ್ವತಿ ದಂಪತಿಯ ಪುತ್ರಿ.

-ಶಶಿ