ವೀರಾಪೇಟೆ, ಮಾ. ೨೨: ಪಟ್ಟಣ ಪಂಚಾಯಿತಿಯ ೨೦೨೨-೨೩ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ ಹಿಂದಿನ ಸಾಲಿಗಿಂತ ರೂ. ೯.೭೬ ಲಕ್ಷ ಕಡಿಮೆ ಆದಾಯ ಗಳಿಸಿದೆ.
ಪುರಭವನದಲ್ಲಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲ್ಲಿ ನಡೆಸಲಾದ ವಾರ್ಷಿಕ ಹರಾಜಿನಲ್ಲಿ ೨೦೨೨-೨೩ ನೇ ಸಾಲಿನಲ್ಲಿ ೯ ಲಕ್ಷದ ೭೬೦೦ ಸಾವಿರ ರೂ. ಅತ್ಯಂತ ಕಡಿಮೆ ಅದಾಯ ಲಭಿಸಿದೆ. ಕಳೆದ ಸಾಲಿನಲ್ಲಿ ೧೯,೫೯,೩೦೦ ರೂ.ಗಳಿಗೆ ಹರಾಜು ಪ್ರಕ್ರಿಯೆ ನಡೆದಿತ್ತು.
ಎರಡು ಹಂದಿ ಮಾಂಸ ಹಾಗೂ ಎರಡು ಮೀನು ಮಾರಾಟ ಮಳಿಗೆಗಳ ಹರಾಜು ಸರಕಾರಿ ದರಕ್ಕಿಂತ ಕಡಿಮೆ ಬಂದ ಕಾರಣ ಮರು ಹರಾಜು ನಡೆಸ ಲಾಗುತ್ತದೆ ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ಹೇಳಿದ್ದಾರೆ.
ಹರಾಜಿನಲ್ಲಿ ಭಾಗವಹಿಸಿದ್ದ ವರ್ತಕ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ವಾರ್ಷಿಕ ಲಕ್ಷಾಂತರ ರೂ.ಗಳ ಹರಾಜು ನಡೆಸಲಾಗುತ್ತದೆ. ಪಟ್ಟಣದ ಉಳಿದ ಕಡೆಗಳಲ್ಲಿ ಮೀನು, ಮಾಂಸ ಮಾರಾಟ ಮಾಡಲು ಮನ ಬಂದAತೆ ಪರವಾನಿಗೆ ನೀಡುತ್ತಿರುವುದಿಂದ ವ್ಯಾಪಾರ ಕುಸಿಯುತ್ತಿದೆ. ಪರಿಣಾಮ ನಷ್ಟವಾಗುತ್ತಿದೆ.
ಹಂದಿ ಮಾಂಸ ಮಳಿಗೆಗೆ ಮೂಲಭೂತ ಸೌಕರ್ಯ ಇಲ್ಲ. ಪ್ರತಿ ಬಾರಿ ಹರಾಜಿನಲ್ಲಿ ಭರವಸೆ ನೀಡಲಾಗುತ್ತದೆ ಹೊರತು ಕಾರ್ಯಗತವಾಗಿಲ್ಲ. ತಾತ್ಕಾಲಿಕ ವಿದ್ಯುತ್ ಸಂರ್ಪಕ ಇದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲ. ವಾರ್ಷಿಕ ಆದಾಯ ಹೆಚ್ಚಿದ್ದರೂ ಕೂಡ ಮೂಲಭೂತ ಸೌಕರ್ಯ ಒದಗಿಸಲು ಪ.ಪಂ. ವಿಫಲವಾದ ಕಾರಣ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಮಳಿಗೆಯ ದುಸ್ಥಿತಿ ಬಗ್ಗೆ ಗಮನ ಸೆಳೆದರು.
ವರ್ತಕರ ಪರ ಮಹಮ್ಮದ್ ಮಾತನಾಡಿ, ಮೀನು ಮಾರುಕಟ್ಟೆ ದುಸ್ಥಿತಿ ಹೇಳತೀರದಾಗಿದೆ. ಪಟ್ಟಣದ ಹೊರಗೆ ಮನಬಂದAತೆ ಮೀನು ಮಾರಾಟವಾಗುತ್ತದೆ. ಮೀನು ಕೆಡದಂತೆ ಶೀತಲೀಕರಣದ ವ್ಯವಸ್ಥೆ ಇಲ್ಲ. ನೀರು ಹರಿಯಲು ವ್ಯವಸ್ಥೆ ಇಲ್ಲ. ಶೌಚಾಲಯ ಗಬ್ಬೆದ್ದು ನಾರುತ್ತಿದೆ ಎಂದು ಮಾರುಕಟ್ಟೆಯ ದುಸ್ಥಿತಿಯ ಬಗ್ಗೆ ವಿವರಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಅಭಿಯಂತರ ಹೇಮಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
 
						