ಕುಶಾಲನಗರ, ಮಾ.೨೨: ಕುಶಾಲನಗರ ಡಿವೈಎಸ್ಪಿ ಶೈಲೆಂದ್ರ ಅವರು ದಿಡೀರನೆ ಅಸ್ವಸ್ಥರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಡಿವೈಎಸ್ಪಿ ಶೈಲೇಂದ್ರ ಅವರು ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಮನೆಯಲ್ಲಿದ್ದ ಸಂದರ್ಭ ರಕ್ತದ ಒತ್ತಡ ಏರುಪೇರಾದ ಕಾರಣ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ತಲೆಗೆ ತೀವ್ರ ಗಾಯ ಉಂಟಾಗಿದ್ದು, ಪ್ರಥಮ ಚಿಕಿತ್ಸೆ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ.