ಶನಿವಾರಸಂತೆ, ಮಾ. ೨೧: ಕೊಡ್ಲಿಪೇಟೆಯ ಸಮೀಪದ ಶಾಂತಪುರ ಇಂದು ಬೆಳಿಗ್ಗೆ ೭ ತಿಂಗಳ ಕಾಡುಕುರಿ ಮರಿಯೊಂದು ತಂತಿ ಬೇಲಿ (ಮೆಸ್) ದಾಟುವಾಗ ಕುರಿಮರಿಯ ಕುತ್ತಿಗೆ ಹಾಗೂ ನಾಲಿಗೆಗೆ ಗಾಯವಾಗಿ ಮೃತಪಟ್ಟ ಘಟನೆ ನಡೆದಿದೆ.

ಕಾಡುಕುರಿಮರಿ ಶಾಂತಪುರದ ಭಗವಾನ್ ಅವರ ಮನೆಯ ಹತ್ತಿರ ಮೆಸ್ ತಂತಿ ಬೇಲಿ ದಾಟುವಾಗ ಕುತ್ತಿಗೆ ಸಿಲುಕಿಕೊಂಡು ಕುತ್ತಿಗೆ, ನಾಲಿಗೆಗೆ ಗಾಯವಾಗಿದೆ. ಇದನ್ನು ರಕ್ಷಿಸಲು ಭರತ್ ಎಂಬವರು ಕೊಡ್ಲಿಪೇಟೆ ಅರಣ್ಯ ಕಚೇರಿಗೆ ತಮ್ಮ ಕಾರಿನಲ್ಲಿ ತಂದು ಒಪ್ಪಿಸಿದ್ದಾರೆ. ಅಷ್ಟರಲ್ಲಿ ಕಾಡುಕುರಿ ಮರಿಯು ಸಾವನ್ನಪ್ಪಿದೆ. ಉಪ ಅರಣ್ಯ ಇಲಾಖಾಧಿಕಾರಿ ಎಸ್.ಸಿ. ಗೋವಿಂದ ರಾಜ್, ಸಿಬ್ಬಂದಿಗಳಾದ ರಮೇಶ್, ಸಾಯಬಣ್ಣ ತಳಿವಾರ ಮತ್ತು ಭರತ್ ಅವರುಗಳು ತಮ್ಮ ಇಲಾಖಾ ವಾಹನದಲ್ಲಿ ಶನಿವಾರಸಂತೆ ಪಶುವೈದ್ಯ ಆಸ್ಪತ್ರೆಗೆ ತರಲಾಗಿ ಪಶುವೈದ್ಯಾಧಿಕಾರಿ ಡಾ|| ಬಿ.ಎಂ. ಸತೀಶ್ ಕುಮಾರ್ ಕಾಡುಕುರಿಯ ಮರಣೋತ್ತರ ಪರೀಕ್ಷೆ ನಡೆಸಿ ಒಪ್ಪಿಸಿದರು.