ಸೋಮವಾರಪೇಟೆ,ಮಾ.೨೧: ಸಮೀಪದ ಕಿರಗಂದೂರು ಗ್ರಾಮದಲ್ಲಿರುವ ಟಾಟಾ (ಡಿಬಿಡಿ)ಎಸ್ಟೇಟ್‌ನಲ್ಲಿ ಕಳೆದ ಒಂದು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿರುವ ಅಸ್ಸಾಂ ಮೂಲದ ವ್ಯಕ್ತಿಯೋರ್ವ ತನ್ನ ಫೇಸ್‌ಬುಕ್ ಖಾತೆಯಲ್ಲಿ ‘ಶಿವ ರೈವಾನಕಿ’ ಎಂದು ಪ್ರೊಫೈಲ್ ಮಾಡಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿದ್ದು, ಈತನ ವಿರುದ್ಧ ತನಿಖೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಶಿವ ರೈವಾನಕಿ ಎಂದು ನಕಲಿ ಹೆಸರಿನಲ್ಲಿ ಖಾತೆ ತೆರೆದು ಕೆಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದು, ಈತನ ಅಸಲಿ ಹೆಸರು ಹಸ್ಮಲ್ ಆಲಿ ಆಗಿದೆ. ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ದಿನಾಂಕ ೧೯೮೯ ಎಂದಿದ್ದು, ನಾಲ್ವರು ಹೆಣ್ಣು, ಒಂದು ಗಂಡು ಮಗು ಇದೆ. ಈತ ಸ್ಥಳೀಯವಾಗಿ ತನ್ನನ್ನು ಅಸ್ಸಾಮಿಗನೆಂದು ಹೇಳಿಕೊಂಡಿದ್ದು, ಈತನ ಪೂರ್ವಾಪರದ ಬಗ್ಗೆ ತನಿಖೆ ನಡೆಸಬೇಕು ಎಂದು ಐಗೂರು ಗ್ರಾಮದ ಕೆಲವರು ಸ್ಥಳೀಯ ಬೀಟ್ ಪೊಲೀಸರಿಗೆ ಮನವಿ ಮಾಡಿದ್ದಾರೆ.