ಮಡಿಕೇರಿ, ಮಾ. ೧೯: ಕವಿತಾ ಮೀಡಿಯಾ ಸ್ಟೋರ್ ಲಿಮಿಟೆಡ್, ಹೈಬ್ರೀಡ್ ನ್ಯೂಸ್, ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನೀಡಲಾಗುವ ನ್ಯಾಷನಲ್ ಐಕಾನಿಕ್ ಅವಾರ್ಡ್ಗೆ ಜಿಲ್ಲೆಯ ಭಾಗಮಂಡಲದ ರಂಜಿತ್ ಡಿ. ಕುದುಪಜೆ ಆಯ್ಕೆಯಾಗಿದ್ದಾರೆ.

ತಾ. ೨೦ ರಂದು (ಇಂದು) ದೆಹಲಿಯಲ್ಲಿ ನಡೆಯಲಿರುವ ‘ದೆಹಲಿ ಕನ್ನಡ ಕಲಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಂಜಿತ್ ಅವರು ದಾಮೋದರ ಮತ್ತು ಜಾನಕಿ ಅವರ ಪುತ್ರನಾಗಿದ್ದು, ಹುಬ್ಬಳ್ಳಿಯಲ್ಲಿ ಶುಶ್ರೂಷಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಜೊತೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.