ಕುಶಾಲನಗರ, ಮಾ. ೧೯: ಕೊಡಗು ಜಿಲ್ಲಾ ಸೀರ್ವಿ ಸಮಾಜ ವತಿಯಿಂದ ನಗರದಲ್ಲಿ ಹೋಳಿ ಹಬ್ಬ ಆಚರಣೆ ಸಂಭ್ರಮದಿAದ ನಡೆಯಿತು.
ಬಣ್ಣದ ಹೋಳಿ ಆಚರಣೆ ಮುನ್ನಾ ದಿನ ರಾತ್ರಿ ಹೋಲಿ ದಹನ್ ಕಾರ್ಯಕ್ರಮ, ಶುಕ್ರವಾರ ಬೆಳಗ್ಗೆ ಚಾಮುಂಡಿ ಪೂಜೆ, ಸಾಂಪ್ರದಾಯಿಕ ಡೂಂಡ್ ಆಚರಣೆ ಸೇರಿದಂತೆ ಭಜನೆ, ಪ್ರಾರ್ಥನೆ ನಡೆಯಿತು.
ಸಮುದಾಯ ಬಾಂಧವರು ಪರಸ್ಪರ ಬಣ್ಣ ಹಚ್ಚಿ, ಬಣ್ಣದ ನೀರಿನ ಓಕುಳಿ ಆಟವಾಡಿ ಶುಭಾಶಯ ಕೋರಿ ನೃತ್ಯ ಮಾಡಿ ಸಂಭ್ರಮಿಸಿದರು. ತಮ್ಮ ದೈನಂದಿನ ವ್ಯಾಪಾರ ವಹಿವಾಟು ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಾಮೂಹಿಕ ಸಹಭೋಜನ ಮೂಲಕ ಹೋಳಿ ಹಬ್ಬ ಆಚರಿಸಿದರು.
ಸಮಾಜದ ಅಧ್ಯಕ್ಷ ಕಿಶನ್ ಲಾಲ್, ಪ್ರಮುಖರಾದ ಓಂಪ್ರಕಾಶ್, ದಿನೇಶ್, ರಾಜೇಶ್, ರಾಜುರಾಂ, ಖಾನಾರಾಂ, ಧರ್ಮಿಚಂದ್, ನೇಮಿಚಂದ್, ಮೋಹನ್ ಲಾಲ್, ಅನಿತಾ, ಕಂಚನ್ ಮತ್ತಿತರರು ಇದ್ದರು.