ನಾಪೋಕ್ಲು, ಮಾ. ೧೯: ಸ್ಥಳೀಯ ಶ್ರೀ ಭಗವತಿ ದೇವಾಲಯದಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ಪವಿತ್ರ ಪಟ್ಟಣಿ ಹಬ್ಬವು ಜರುಗಿತು. ಬೆಳಿಗ್ಗೆ ಎತ್ತು ಪೋರಾಟ ನಂತರ ದೇವಾಲಯದಲ್ಲಿ ಬೊಳ್‌ಕಾಟ್ ಕಾರ್ಯಕ್ರಮ ಜರುಗಿದ ನಂತರ ಮಹಾಪೂಜೆ ನಡೆದು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಿತು. ಈ ಬಾರಿಯ ಅನ್ನದಾನವನ್ನು ಹಿರಿಯರಾದ ಬೊಪ್ಪೇರ ಕಾವೇರಪ್ಪ ವಹಿಸಿಕೊಂಡಿದ್ದರು. ಸಾಯಂಕಾಲ ಶ್ರೀ ಭಗವತಿ ದೇವರ ಮೂರ್ತಿಯನ್ನು ಹೊತ್ತು ದೇವಾಲಯ ಪ್ರದಕ್ಷಿಣೆ ಬರಲಾಯಿತು. ತಾ.೨೦ ರಂದು (ಇಂದು) ದೇವರ ಜಳಕ ಕಾರ್ಯಕ್ರಮ ನಡೆಯಲಿದೆ.