ಮಡಿಕೇರಿ, ಮಾ. ೧೯ : ಕುಶಾಲನಗರ ತಾಲ್ಲೂಕು, ಉಲುಗುಲಿ ಗ್ರಾಮದ ಸೂರ್ಯ ಸ್ಪೆಂಡೊರ್ ಪ್ರೆöÊ.ಲಿ. ಇವರಿಗೆ ಸೇರಿದ ಪರಾಧೀನ ಜಾಗ ಸ.ನಂ.೧೮೫ ರ ೧೩.೩೯ ಎಕ್ರೆ ಜಾಗದಲ್ಲಿ ವ್ಯವಸಾಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಅಡಚಣೆಯಾದ ೨೪ ಬೀಟೆ ಮತ್ತು ೨೭೧ ಇತರೆ ಜಾತಿಯ ಮರಗಳನ್ನು ಅರಣ್ಯ ಇಲಾಖಾ ವತಿಯಿಂದ ತೆರವುಗೊಳಿಸಲು ಕೋರಲಾಗಿದೆ.
ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ತಾ. ೨೪ ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರಿಗೆ ಸಲ್ಲಿಸಬೇಕಾಗಿ ತಿಳಿಸಿದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.