ಶನಿವಾರಸಂತೆ, ಮಾ. ೧೯: ಪಟ್ಟಣ ಹಾಗೂ ಬಿದರೂರು ಗ್ರಾಮದಲ್ಲಿ ನೆಲೆಸಿರುವ ರಾಜಸ್ತಾನ ಮೂಲದ ೧೫ ಕುಟುಂಬಸ್ಥರು ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿAದ ಆಚರಿಸಿzರು.
ಸ್ವಂತ ಜಮೀನಿನಲ್ಲಿ ಅಗ್ನಿಕುಂಡ ರಚಿಸಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಸುತ್ತಲು ನೃತ್ಯ ಮಾಡುತ್ತಾ, ಹಾಡುತ್ತಾ ರಂಜಿಸಿದರು. ಪರಸ್ಪರ ಬಣ್ಣ ಬಳಿದುಕೊಂಡು ಆನಂದಿಸಿದರು. ಸಿಹಿ ಹಂಚಿ, ವಿಶೇಷ ಭಕ್ಷö್ಯಗಳ ಭೋಜನ ಸವಿದರು.
ಕುಟುಂಬಗಳ ಮುಖ್ಯಸ್ಥರಾದ ಮೋಹನ್ ಲಾಲ್ ಚೌದರಿ, ಮಂಗಲ್ ರಾಂ, ಸುರೇಶ್, ದಿನೇಶ್, ಚೇತನ್, ಪುರೋಹಿತ್, ಪ್ರಕಾಶ್, ಕೈಲಾಸ್, ಮನೋಹರ್, ಮಹೇಂದರ್ ಕುಟುಂಬಸ್ಥರು ಪಾಲ್ಗೊಂಡಿದ್ದರು.