ವೀರಾಜಪೇಟೆ, ಮಾ. ೧೬: ರೈತ ಪರ ಕಾಳಜಿಯೊಂದಿಗೆ ೮೦ ವರ್ಷಗಳ ಹಿಂದೆ ಸ್ಥಾಪಿಸಲಾದ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳವು ಇಂದು ೫೯೫೩ ರೈತ ಸದಸ್ಯರನ್ನು ಹೊಂದಿರುವುದು ಸಂತೋಷ ತಂದಿದೆ ಎಂದು ಕೊಡಗು ವೀರಾಜಪೇಟೆಯಲ್ಲಿನ ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ, ಮಾಜಿ ಅಧ್ಯಕ್ಷ ನಡಿಕೇರಿಯಂಡ ಎಸ್. ನಾಣಯ್ಯ ಹೇಳಿದರು.

ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ, ವೀರಾಜಪೇಟೆ ಇದರ ಆಧುನಿಕ ಅಕ್ಕಿಗಿರಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೯೭೦ರಲ್ಲಿ ಪ್ರಾರಂಭಿಸಿದ ಅಕ್ಕಿ ಗಿರಣಿಯನ್ನು ಇಂದು ಆಧುನೀಕರಣಗೊಳಿಸಿ ನೂತನ ಯಂತ್ರೋಪಕರಣ ಅಳವಡಿಸಿರುವುದು ಪ್ರಗತಿಯ ಸೂಚಕ. ರೈತ ಪರ ಚಿಂತನೆ ಜಾಗೃತವಾಗಿದೆ ಎಂದರು.

ಈಗಿನ ಅಧ್ಯಕ್ಷ ವಾಟೇರಿರ ಬೋಪಣ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೪೩ರಲ್ಲಿ ದಿ ಕೂರ್ಗ್ ಪ್ರೋವಿನ್‌ಶಿಯಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಎಂದು ನೋಂದಾಯಿಸಲ್ಪಟ್ಟು ನಂತರ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ಎಂದು ತಿದ್ದುಪಡಿ ಮಾಡಲಾಗಿದೆ. ಕಂಜಿತAಡ ಎಂ. ಕುಶಾಲಪ್ಪನವರು ಸ್ಥಾಪಕ ಅಧ್ಯಕ್ಷರಾಗಿದ್ದು, ಸಂಘದಲ್ಲಿ ಈವರೆಗೆ ೧೬ ಅಧ್ಯಕ್ಷರು ಮತ್ತು ೨೫ ಉಪಾಧ್ಯಕ್ಷರುಗಳು ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಉಪಾಧ್ಯಕ್ಷರಾಗಿ ತಾತಂಡ ಎಂ. ಕಾವೇರಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದು, ಸಂಘದ ಕಾರ್ಯ ವ್ಯಾಪ್ತಿಯು ಕೊಡಗು ಜಿಲ್ಲೆಗೆ ಸೀಮಿತವಾಗಿದೆ ಎಂದರು.

ಸAಘದ ವಂತಿಯಿAದ ರೈತರಿಗೆ ಬೇಕಾಗುವ ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣ, ಕೋವಿ ಮತ್ತು ಮದ್ದುಗುಂಡು ಇತ್ಯಾದಿಗಳನ್ನು ಪೂರೈಸಲಾಗುತ್ತಿದೆ ಎಂದರು.

ಪ್ರ‍್ರಾಸ್ತಾವಿಕ ನುಡಿಯನ್ನು ಕಂದ ಭೀಮಯ್ಯ, ಸ್ವಾಗತ ಮತ್ತು ವಂದನಾರ್ಪಣೆಯನ್ನು ನಿರ್ದೇಶಕ ಕಂಜಿತAಡ ಮಂದಣ್ಣ ಮಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಟಿ.ಎಂ. ಕಾವೇರಪ್ಪ, ನಿರ್ದೇಶಕರಾದ ಕಂದಾ ಭೀಮಯ್ಯ, ಕಾವೇರಿ ಮಂದಣ್ಣ, ಕೆ.ಎ. ಬಿದ್ದಪ್ಪ, ಲತಾ ಭೀಮಯ್ಯ, ವೀಣಾ ಮಹೇಶ್, ಕೆ.ಆರ್. ವಿನೋದ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.