ಗೋಣಿಕೊಪ್ಪಲು, ಮಾ. ೧೬: ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಆಗ್ರಹಿಸಿದ್ದಾರೆ. ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗೆ ಉಚಿತ ವಿದ್ಯುತ್ ನೀಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.

ಗೋಣಿಕೊಪ್ಪಲುವಿನ ರೈತ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಇತರ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿರುವ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಕೊಡಗಿನ ಶಾಸಕರು ವಿಧಾನ ಸಭೆಯಲ್ಲಿ ಜಿಲ್ಲೆಯ ರೈತರ ಪರ ಧ್ವನಿ ಎತ್ತುವ ಮೂಲಕ ಜಿಲ್ಲೆಯ ಕಾಫಿ ಬೆಳೆಯುವ ರೈತರಿಗೆ ಉಚಿತ ವಿದ್ಯುತ್ ನೀಡಲು ಮುಖ್ಯಮಂತ್ರಿಗಳನ್ನು ಆಗ್ರಹಿಸಬೇಕು. ಈಗಾಗಲೇ ರೈತ ಸಂಘದಿAದ ಹಲವು ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಕೊಡಗು ಜಿಲ್ಲೆಯ ಕಾಫಿ ಬೆಳೆಯುವ ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಲ್ಲಿ ವಿಫಲ ವಾಗಿದೆ ಎಂದು ಆರೋಪಿಸಿದರು.

ಉಳಿದ ರಾಜ್ಯದಲ್ಲಿ ವರ್ಷದ ಆರರಿಂದ ಏಳು ತಿಂಗಳು ರೈತರ ವಿವಿಧ ಬೆಳೆಗಳಿಗೆ ಉಚಿತ ವಿದ್ಯುತ್ ಅನ್ನು ಸರ್ಕಾರ ಒದಗಿಸುತ್ತಿದೆ. ಆದರೆ ಕೊಡಗು ಜಿಲ್ಲೆಗೆ ವರ್ಷದ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ವಿದ್ಯುತ್ ಮಾತ್ರ ಅವಶ್ಯಕತೆಯಿದೆ ಈ ಸಮಯದಲ್ಲಿ ವಿದ್ಯುತ್ ನೀಡಲು ಆಗ್ರಹಿಸಿ ಬೆಳಗಾಂ ಅಧಿವೇಶನದ ಸಂದರ್ಭ ಸೋಮವಾರಪೇಟೆಯಲ್ಲಿ ೧೭ ದಿನಗಳ ಕಾಲ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿತ್ತು. ಆದರೆ ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ವಿಧಾನ ಸಭೆಯಲ್ಲಿ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ ಎಂದರು.

ಚೆಸ್ಕಾಂ ಇಲಾಖೆಯು ರೈತರ ಪಂಪ್ ಸೆಟ್‌ಗಳಿಗೆ ೧ ಹೆಚ್.ಪಿ.ಗೆ ತಲಾ ೮೦ ರೂ.ನಂತೆ ಹಣವನ್ನು ಪಡೆಯುತ್ತಿದೆ. ಇದರಿಂದ ತಿಂಗಳಿಗೆ ೮೦೦ ಹಣ ಸಂಗ್ರಹಿಸುತ್ತಿದ್ದಾರೆ ಇದು ಸರಿಯಲ್ಲ. ಕೊಡಗಿನ ರೈತರು ಕಾರ್ಖಾನೆ ನಡೆಸುತ್ತಿಲ್ಲ. ಕೇವಲ ಕಾಫಿ ಗಿಡಗಳಿಗೆ ನೀರು ಹಾಯಿಸುವ ಸಂದರ್ಭ ಮಾತ್ರ ವಿದ್ಯುತ್‌ಅನ್ನು ಬಳಸುತ್ತಿದ್ದಾರೆ. ಉಳಿದ ಅವಧಿಯಲ್ಲಿ ನೀರು ಹಾಯಿಸುವ ಪ್ರಮೇಯ ಒದಗಿ ಬರುವುದಿಲ್ಲ. ಹೀಗಾಗಿ ೧ ಹೆಚ್.ಪಿ.ಗೆ ತಲಾ ೮೦ ರೂ.ನಂತೆ ನಿಗದಿಪಡಿಸಿರುವ ಹಣವನ್ನು ನಿಲ್ಲಿಸಬೇಕು. ೧೦ ಹೆಚ್.ಪಿ.ಗೆ ಮೇಲಿರುವ ರೈತರಿಗೆ ಯೂನಿಟ್‌ಗೆ ನೀಡುತ್ತಿರುವ ೩.೮೦ ಹಣವನ್ನು ಕಡಿಮೆಗೊಳಿಸಬೇಕು. ಅಲ್ಲದೆ ಶೇ. ೯ರಂತೆ ನಿಗದಿಪಡಿಸಿರುವ ತೆರಿಗೆಯನ್ನು ಇಳಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು. ಉಳಿದ ಜಿಲ್ಲೆಗೆ ಹೋಲಿಸಿದರೆ ಕೊಡಗಿನಲ್ಲಿ ಕೇವಲ೧ ಡಿವಿಜನ್ ಚೆಸ್ಕಾಂ ಕೆಲಸ ನಿರ್ವಹಿಸುತ್ತಿದೆ ಇದರಿಂದ ಜಿಲ್ಲೆಯ ಜನತೆಗೆ ಸಮಸ್ಯೆ ಆಗಿದೆ. ವಾಣಿಜ್ಯ ನಗರಗೋಣಿಕೊಪ್ಪಲುವಿನಲ್ಲಿ ನೂತನ ಡಿವಿಜನ್ ಆರಂಭಿಸುವAತೆ ಒತ್ತಾಯಿಸಿದರು.

ಯಾವುದೇ ಕಾರಣಕ್ಕೂ ರೈತರು ೧೦ ಹೆಚ್.ಪಿ ಒಳಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ಲನ್ನು ಪಾವತಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಬಗ್ಗೆ ರೈತರಿಗೆ ತೊಂದರೆ ಎದುರಾದಲ್ಲಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದರು. ಕೂಡಲೇ ಸರ್ಕಾರ ಈ ಬಗ್ಗೆ ಶಾಸಕರ ಸಮ್ಮುಖದಲ್ಲಿ ಸಭೆ ಕರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನಕ್ಕೆ ೧೨ ಗಂಟೆ ವಿದ್ಯುತ್ ನೀಡಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿಯೂ ಈ ಬಗ್ಗೆ ವಿದ್ಯುತ್ ನೀಡಲುಕ್ರಮ ಕೈಗೊಳ್ಳಬೇಕು. ಪ್ರಸ್ತುತ ವರ್ಷದಲ್ಲಿ ಜಿಲ್ಲೆಯ ರೈತರು ಬಹಳಷ್ಟು ಸಂಕಷ್ಟ ಎದುರಿಸಿದ್ದಾರೆ. ಕೊಡಗಿನ ಶಾಸಕರು ಈ ಬಗ್ಗೆ ಮೈಸೂರು ಡಿವಿಜನ್‌ರವರೊಂದಿಗೆ ಮಾತುಕತೆ ನಡೆಸಿ ವಿದ್ಯುತ್ ನೀಡಲು ಕ್ರಮಕೈಗೊಳ್ಳಲು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ಶ್ರೀಮಂಗಲ ಹೋಬಳಿ ಅಧ್ಯಕ್ಷಚಟ್ಟಂಗಡ ಕಂಬ ಕಾರ್ಯಪ್ಪ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್‌ಮಾದಪ್ಪ, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ, ತಿತಿಮತಿ ರೈತ ಮುಖಂಡ ಚೆಪ್ಪುಡೀರ ರಂಜನ್ ಉಪಸ್ಥಿತರಿದ್ದರು.