ಶನಿವಾರಸಂತೆ, ಮಾ. ೧೬: ನಿವೃತ್ತ ಸೈನಿಕರಿಗೆ ಸಮಸ್ಯೆಗಳಾದರೂ ದೇಶಪ್ರೇಮದಲ್ಲಿ ಕೊರತೆಯಾಗಿಲ್ಲ ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್. ಮಹೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಿವೃತ್ತ ಸೈನಿಕರ ಸಂಘದ ಸಭಾಂಗಣದಲ್ಲಿ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಉಪಾಧ್ಯಕ್ಷ ಪಿ.ಎನ್. ಗಂಗಾಧರ್ ಹಾಗೂ ಕಾರ್ಯದರ್ಶಿ ಎಸ್.ಎನ್. ಪಾಂಡು ಮಾತನಾಡಿ, ನಿವೃತ್ತ ಸೈನಿಕರಲ್ಲಿ ಒಗ್ಗಟ್ಟಿರಬೇಕು. ಸಮಸ್ಯೆಗಳಿಗೆ ಪರಸ್ಪರ ಸ್ಪಂದಿಸಿ ಪರಿಹರಿಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಂಘದ ವತಿಯಿಂದ ನಿವೃತ್ತ ಸೈನಿಕರಾದ ಕೆ.ಡಿ. ಗಣೇಶ್, ದೊಡ್ಡಮಳ್ತೆ ಚಂದ್ರಶೇಖರ್, ಕುಶಾಲನಗರ ಲೋಕೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕಾರಿ ಮಂಡಳಿಯ ನಿರ್ದೇಶಕರಾದ ಕೆ.ಡಿ. ಚಂದ್ರಪ್ಪ, ಟಿ.ಎಸ್. ನಾಗರಾಜ್, ಕೆ.ಪಿ. ತಿಮ್ಮಯ್ಯ, ಬಿ.ಆರ್. ಆನಂದ್, ಡಿ.ಎಸ್. ಸೋಮಶೇಖರ್, ಬಿ.ಡಿ. ಪರಮೇಶ್, ಸದಸ್ಯರು ಉಪಸ್ಥಿತರಿದ್ದರು.