ನಾಪೋಕ್ಲು, ಮಾ. ೧೫: ಶಿವಮೊಗ್ಗದಲ್ಲಿ ನಡೆದ ಮಲ್ನಾಡ್ ಓಪನ್ ರಾಷ್ಟçಮಟ್ಟದ ಕರಾಟೆ ಟೂರ್ನಮೆಂಟ್‌ನಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಹಾಗೂ ಮೂರ್ನಾಡು ಪ್ರೌಢಶಾಲೆಯ ವಿದ್ಯಾರ್ಥಿ ಚೆಟ್ಟಿಯಾರಂಡ ಧೀರಜ್ ಕಾರ್ಯಪ್ಪ ಸಹೋದರರು ಭಾಗವಹಿಸಿ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇವರು ಸೆನ್ಸಾಯಿ ನಾಗೇಂದ್ರಪ್ಪ ಅವರಿಂದ ತರಬೇತಿ ಪಡೆಯುತ್ತಿದ್ದು, ನೆಲಜಿ ಗ್ರಾಮದ ಚೆಟ್ಟಿಯಾರಂಡ ಮನು ಮತ್ತು ಪವಿತಾ ದಂಪತಿ ಪುತ್ರರಾಗಿದ್ದಾರೆ.